384
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ಹೆದ್ದಾರಿ ಅಡ್ಡದಾಟುವಾಗ ಕಾರು ಬಡಿದು ಮದ್ಯವಯಸ್ಕ ವ್ಯಕ್ತಿ ಮೃತಪಟ್ಟರು. ಮೀಯಪದವು ನಿವಾಸಿಯಾಗಿದ್ದು, ಮಂಜೇಶ್ವರ ಕೆದುಂಬಾಡಿಯಲ್ಲಿ ವಾಸಿಸುತ್ತಿದ್ದ ಜಯೋನಂದ(48)ಮೃತ ವ್ಯಕ್ತಿಯಾಗಿದ್ದಾರೆ.
ಹೊಸಂಗಡಿಯಿಂದ ಬಸ್ಸಿನಲ್ಲಿ ಬಂದು ಮಂಜೇಶ್ವರದಲ್ಲಿಳಿದು ಹೆದ್ದಾರಿ ಅಡ್ಡದಾಟುವಾಗ ಕಾಸರಗೋಡು ಭಾಗದಿಂದ ಬಂದ ಕಾರು ಬಡಿದು ಅಫಘಾತ ಸಂಭವಿಸಿತು. ಕೂಡಲೇ ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಜೀವಾಪಾಯ ರಕ್ಷಿಸಲಿಕ್ಕಾಗಲಿಲ್ಲ. ಗುರುವಾರ ಸಂಜೆ ಘಟನೆ ನಡೆದಿದ್ದು, ಮಂಜೇಶ್ವರ ಪೋಲೀಸರು ಕಾರು ಚಾಲಕನ ವಿರುದ್ದ ಕೇಸು ದಾಖಲಿಸಿದ್ದಾರೆ. ಮೃತರು ಪತ್ನೌ ಸವಿತ ಹಾಗೂ ಮೂವರು ಮಕ್ಕಳನ್ನಗಲಿದ್ದಾರೆ.