250
- ನೊಂದ ಕುಟುಂಬದ ಕಣ್ಣೀರು ಒರೆಸಿ ಸಹಾಯಧನವಿತ್ತ ಪುತ್ತಿಗೆ ಪಂ. ಸಿಡಿಎಸ್ ಕಾರ್ಯಕರ್ತೆಯರು
ಪುತ್ತಿಗೆ ಗ್ರಾಮ ಪಂಚಾಯತ್ ಸಿ.ಡಿ.ಎಸ್ ಅಧ್ಯಕ್ಷೆಯಾಗಿದ್ದ ಸುಂದರಿ ಹಾಗೂ ಉದ್ಯೋಗ ಖಾತರಿ ಕಾರ್ಮಿಕರಾಗಿದ್ದ ಸಂಜೀವ ಎಂಬವರ ಅಕಾಲಿಕ ಅಗಲಿಕೆಗೆ ಕಂಬನಿ ಮಿಡಿದ ಪುತ್ತಿಗೆ ಗ್ರಾ ಪಂ. ಸಿ ಡಿ. ಎಸ್. ಕಾರ್ಯಕರ್ತರು ನೊಂದ ಕುಟುಂಬಕ್ಕೆ ಸಾಂತ್ವನವನ್ನಿತ್ತು
ಕಣ್ಣೀರೊರೆಸಿದ್ದಾರೆ.
ನೊಂದ ಕುಟುಂಬಕ್ಕೆ ನೆರವಾಗಲು ಸಿ.ಡಿ.ಎಸ್ ಕಾರ್ಯಕರ್ತೆಯರು ಸಂಗ್ರಹಿಸಿದ ಧನ ಸಹಾಯ ಮತ್ತು ಪಂಚಾಯತಿನ ವಾರ್ಷಿಕ ಯೋಜನೆಯಲ್ಲಿ ಒಳಪಡಿಸಿ ನೀಡುವುದಾಗಿ ಘೋಷಿಸಿದ ವಿವಾಹ ಧನ ಸಹಾಯವನ್ನು ನೊಂದ ಕುಟುಂಬದ ಆಶ್ರಿತರಿಗೆ ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ನ ಹಸ್ತಾಂತರಿಸಿದರು.
ಈ ಸಂದರ್ಭ ಜನಪ್ರತಿನಿಧಿಗಳು, ಪಂ.ನೌಕರರು, ಕುಟುಂಬಶ್ರೀ ಕಾರ್ಯಕರ್ತೆರು ಉಪಸ್ಥಿತರಿದ್ದರು.