1.5K
ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಮತ್ತೆ ಅಫಘಾತಗಳು ಸಂಭವಿಸುತ್ತಿದ್ದು, ಕುಂಬಳೆ ಸಮೀಪದ ಶಿರಿಯಾದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಬೈಕಿಗೆ ಲಾರಿ ಬಡಿದು ಯುವಕನೋರ್ವ ಮೃತಪಟ್ಟನು.
ಪೇರಾಲ್ ಕಣ್ಣೂರಿನ ತ್ಯಾಂಪಣ್ಣ ಪೂಜಾರಿಯವರ ಪುತ್ರ, ಮೆಡಿಕಲ್ ರೆಪ್ರಸೆಂಟೇಟಿವ್ ಆಗಿ ದುಡಿಯುತ್ತಿದ್ದ ರವಿಚಂದ್ರ (36)ಎಂಬವರೇ ಮೃತ ವ್ಯಕ್ತಿಯಾಗಿದ್ದಾರೆ.
ಮಧ್ಯಾಹ್ನ 1.15ರ ವೇಳೆಗೆ ಶಿರಾಯ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಅವಘಡ ಸಂಭವಿಸಿತು.
ಮೃತರು ತಾಯಿ ಸುಂದರಿ, ಪತ್ನಿ ಸಂಧ್ಯಾ, ಏಕೈಕ ಮಗು ಆರಾಧ್ಯ ಳನ್ನು ಅಗಲಿದ್ದಾರೆ. ಮೃತರ ಸಹೋದರ ಜನಾರ್ಧನ ಪೂಜಾರಿ ಪುತ್ತಿಗೆ ಗ್ರಾ.ಪಂ ಸದಸ್ಯರಾಗಿದ್ದಾರೆ.
ರಾ.ಹೆದ್ದಾರಿಯ ಕುಂಬಳೆಯಿಂದ ಮಂಜೇಶ್ವರ ತನಕದ ಪ್ರದೇಶದ ರಸ್ತೆ ಪದೇ,ಪದೇ ಅಪಘಾತಗಳ ತಾಣವಾಗುತ್ತಿದೆ






