69
ಕುಂಬಳೆ: ಬಂದ್ಯೋಡು ಅಡ್ಕ ಬಳಿಯಲ್ಲಿ ಸುಮಾರು 1500ವರ್ಷಗಳ ಹಿನ್ನೆಲೆ ಇದೆಯೆನ್ನಲಾದ ಶ್ರೀ ಬೀರರ ಮಾರ್ಲಾರ ದೈವಕ್ಷೇತ್ರದಲ್ಲಿ ಕುಂಬಳೆಯ ಪ್ರಸಿದ್ದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ಚಿರಂಜೀವಿ ವತಿಯಿಂದ ಶ್ರಮದಾನ ನಡೆಯಿತು.
ಬಂದ್ಯೋಡು ಅಡ್ಕದಲ್ಲಿರುವ ಕ್ಷೇತ್ರವು ಊರ ಪರವೂರ ಭಕ್ತರ ಸಹಕಾರಗಳೊಂದಿಗೆ ನವೀಕರಣಗೊಂಡು,ಪುನರ್ ನಿರ್ಮಾಣವಾಗೂತ್ತಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಾಡಳಿತದ ವಿನಂತಿಯಂತೆ ಕುಂಬಳೆ ಚಿರಂಜೀವಿ ಕ್ಲಬ್ಬಿನ ಸದಸ್ಯರು ದೈವಸ್ಥಾನದ ಸುತ್ತಲೂ ನೆಲಸಮತಟ್ಟು ಮಾಡಲು ಸಹಕರಿಸಿದರು.
ಪ್ರಸ್ತುತ ದೈವಸ್ಥಾನದಲ್ಲಿ ಮುಂದಿನ ತಿಂಗಳು ಎಪ್ರೀಲ್ 23ರಂದು ದೈವಗಳ ಪ್ರತಿಷ್ಟೆಯೊಂದಿಗೆ ಬ್ರಹ್ಮಕಲಶ ನಡೆಯಲಿದೆ.
ಮಾ.13ರಂದು ರಾತ್ರಿ ನಡೆದ ಶ್ರಮದಾನಕ್ಕೆ ಚಿರಂಜೀವಿ ಅಧ್ಯಕ್ಷ ಕೃಷ್ಣಗಟ್ಟಿ ನೇತೃತ್ವದಲ್ಲಿ ಪುರುಷ, ಮಹಿಳೆಯರಾದಿ ಪ್ರಮುಖರು ಪಾಲ್ಗೊಂಡರು. ಚಿರಂಜೀವಿ ಸದಸ್ಯರು ಈಗಾಗಲೇ ಸೀಮೆಯ ಪ್ರಸಿದ್ದ ಕ್ಷೇತ್ರ ಮಧೂರಿನಲ್ಲಿ ಎರಡು ಬಾರಿ ಶ್ರಮದಾನ ನಡೆಸಿದೆ.