- ತುಳು ರಂಗಭೂಮಿ, ಸಿನಿಮಾ ನಟ ವಿವೇಕ್ ಮಾಡೂರು ಇನ್ನಿಲ್ಲ
- ಕುಬ್ಜ ದೇಹವನ್ನೇ ನಟನೆಗೆ ಬಂಡವಾಳ ಮಾಡಿದ್ದ, ‘ಕುಳ್ಳ’ ಖ್ಯಾತಿಯ ನಟನಿಗೆ ನಿದ್ದೆಯಲ್ಲೇ ಇಹಲೋಕ ಯಾತ್ರೆ!
ಮಂಗಳೂರು: ತುಳುರಂಗಭೂಮಿ ಮತ್ತು ಸಿನಿಮಾರಂಗದ ನಟರಾಗಿ ಗುರುತಿಸಲ್ಪಟ್ಟ ವಿವೇಕ್ ಮಾಡೂರು(52)ಶುಕ್ರವಾರ ಬೆಳಿಗ್ಗೆ ಮಾಡೂರಿನ ಸ್ವಗೃಹದಲ್ಲಿ ನಿಧನರಾದರು. ಗುರುವಾರ ರಾತ್ರಿ ಉಂಡು ಮಲಗಿದ್ದ ಅವರು ಶುಕ್ರವಾರ ಬೆಳಿಗ್ಗೆ ಏಳದೇ ಇದ್ದು, ಮನೆ ಮಂದಿ ಎಬ್ಬಿಸಲು ಹೋದಾಗ ನಿದ್ದೆಯಲ್ಲೇ ಮೃತಪಟ್ಟಿದ್ದರೆಂದು ಹೇಳಲಾಗಿದೆ.
ಮೃತ ವಿವೇಕ್ ಅವರು ಪತ್ನಿ ವೇದಾವತಿ ಜತೆ ಮಾಡೂರಿನ ಸಹೋದರನ ಮನೆಯಲ್ಲಿ ವಾಸವಿದ್ದರು. ಈ ಹಿಂದೆ ಎಸ್ ಟಿ.ಡಿ ಬೂತ್ ನಡೆಸುತ್ತಿದ್ದ ಇವರು ಬೂತ್ ಬಂದ್ ಆದಮೇಲೆ ಸಹೋದರನ ಅಂಗಡಿಯಲ್ಲಿ ಕೆಲಸಕ್ಕಿದ್ದರು.
ಅನಂತರ ತುಳು ರಂಗಭೂಮಿಗೆ ಕಾಲೂರಿ ಹಲವು ನಾಟಕಗಳಲ್ಲಿ ಗಮನಾರ್ಹ ಪಾತ್ರ ಮಾಡಿ ತುಳು ಸಿನಿಮ ರಂಗದಲ್ಲೂ ಕಾಣಿಸಿದ್ದರು.
ತನ್ನ ಕುಬ್ಜ ದೇಹವನ್ನೇ ಬಂಡವಾಳ ಮಾಡಿ ಪ್ರೇಕ್ಷಕರನ್ನು ನಗಿಸುತ್ತಿದ್ದ ಅವರು ಹಾಸ್ಯ ಕಲಾವಿದರಾಗಿ ಗಮನಿಸಲ್ಪಟ್ಟಿದ್ದರು. ತುಳು ನಾಟಕ ರಂಗದ ಕಲಾವಿದರ ಒಕ್ಕೂಟದ ಸದಸ್ಯರಾಗಿದ್ದ ಅವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿದ್ದುವು.
ತುಳು ಕಲಾ ಜಗತ್ತಿನ ಪ್ರಸಿದ್ಧ ನಟನಟಿಯರೊಂದಿಗೆ ಹಲವು ನಾಟಕ, ಸಿನಿಮಾಗಳಲ್ಲವರು ನಟಿಸಿದ್ದರು.