ಕುಂಬಳೆ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಸಂಘಟನಾ ಪ್ರಮುಖ್, ಕ್ಯಾಂಪ್ಕೋ ಸಂಸ್ಥೆಯ ಮಾಜಿ ನಿರ್ದೇಶಕರಾಗಿದ್ದ ಎಂ.ಕೆ.ಶಂಕರನಾರಾಯಣ ಭಟ್ ( ಕಿದೂರು ಶಂಕರಣ್ಣ)ಅವರಿಗೆ ಕುಂಬಳೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಅವರ,ಕೊಡುಗೆ ನೆನಪಿಸಲಾಯಿತು.
ಕುಂಬಳೆ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಡಾಕ್ಟರ್ ಕಲ್ಲಡ್ಕ ಪ್ರಭಾಕರ ಭಟ್ , ಕುಟುಂಬ ಪ್ರಬೊಧನ್ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಕಾಸರಗೋಡು ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ನಾಯರ್ ಮುಂತಾದವರು ಉಪಸ್ಥಿತರಿದ್ದು ಅಗಲಿದ ಶಂಕರಣ್ಣ ಅವರಿಗೆ ನುಡಿನಮನ ಸಲ್ಲಿಸಿದರು.
ಬಿಜೆಪಿ ಕೇರಳ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ರವೀಂದ್ರನ್, ಸಹಕಾರ ಭಾರತಿಯ ಪ್ರಾಂತ್ಯ ಅಧ್ಯಕ್ಷ ಅಡ್ವ.ಕರುಣಾಕರನ್ ನಂಬ್ಯಾರ್, ಪ್ರಾಂತ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು, ರಾಷ್ಟ್ರೀಯ ಸೇವಿಕಾ ಸಮಿತಿ ಪ್ರಾಂತ್ಯ ಬೌದ್ಧಿಕ್ ಪ್ರಮುಖ್ ಸರಿತಾ ದಿನೇಶ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ನೇತಾರ, ಕ್ಯಾಂಪ್ಕೋ ನಿರ್ದೇಶಕ ಜಯಪ್ರಕಾಶ್ ತೊಟ್ಟೆತ್ತೋಡಿ,ಬಿ.ಯಂ.ಯಸ್.ಕುಂಬಳೆ ವಲಯ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ನೀರೊಳಿಕೆಯ ಶ್ರೀ ಮಾತಾ ಬಾಲಿಕಾ ಆಶ್ರಮದ ಅಧ್ಯಕ್ಷ ತಲೆಂಗಳ ನಾರಾಯಣ ಭಟ್, ಕುಂಬಳೆ ಸೇವಾ ಸಹಕಾರಿ ಬಿಲ್ಡಿಂಗ್ ಸೊಸೈಟಿ ಅಧ್ಯಕ್ಷ ರಾಜಾರಾಮ ಕಾಮತ್ ಮುಂತಾದವರು ಮೃತರಿಗೆ ನುಡಿ ನಮನ ಸಲ್ಲಿಸಿದರು.
ಶಂಕರಣ್ಣ ಓರ್ವ ಆದರ್ಶ ಸ್ವಯಂಸೇವಕರಾಗಿದ್ದು ಸದ್ದಿಲ್ಲದೆ ಸಾಧನೆ ಮಾಡಿ, ನೂರಾರು ಕಿರಿಯ ಸ್ವಯಂಸೇವಕರಿಗೆ ಪ್ರೇರಣೆ ನೀಡಿದವರು ಎಂದು ಡಾಕ್ಟರ್ ಪ್ರಭಾಕರ ಭಟ್ ಸ್ಮರಿಸಿದರು.
ಶಂಕರಣ್ಣನ ಸಾತ್ವಿಕತೆ, ಸಜ್ಜನಿಕೆ, ಅಪಾರ ತಾಳ್ಮೆ ಎಲ್ಲಾ ಕಾರ್ಯಕರ್ತರಿಗೂ ಮೇಲ್ಪಂಕ್ತಿ ಆಗಬೇಕು.
ಸಂದಿಗ್ಧ ಪರಿಸ್ಥಿತಿಗಳಲ್ಲಿ ಶಂಕರಣ್ಣನ ಆಳವಾಗಿ ಚಿಂತಿಸಿ ಕೈಗೊಳ್ಳುತ್ತಿದ್ದ ನಿರ್ಧಾರ ಯೋಗ್ಯವಾಗಿರುತ್ತಿತ್ತು. ಅವರ ಸಂಘಟನಾ ಚಾತುರ್ಯ ಕಿರಿಯರಿಗೆ ಅನುಕರಣೀಯ ಎಂದು ಕಜಂಪಾಡಿ ಸುಬ್ರಹ್ಮಣ್ಯ ಭಟ್ ನುಡಿದರು.
ನೂರಾರು ಮಂದಿ ಭಾಗವಹಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮ ಶಾಂತಿ ಮಂತ್ರದೊಂದಿಗೆ ಮುಕ್ತಾಯವಾಯಿತು.