111
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ
ಮಂಜೇಶ್ವರ ತಾಲೂಕಿನ 14ಶಿಕ್ಷಣ ಸಂಸ್ಥೆಗಳಿಗೆ ಪೀಠೋಪಕರಣ ವಿತರಿಸಲಾಯಿತು
.ಕುಂಬಳೆ : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ದೀಪ ಯೋಜನೆಯ ವತಿಯಿಂದ ಮಂಜೇಶ್ವರ ತಾಲೂಕಿನ 14 ಶಾಲೆಗಳಿಗೆ ಬೆಂಚು ಮತ್ತು ಡೆಸ್ಕುಗಳನ್ನು ಒದಗಿಸಲಾಯಿತು. 80% ಯೋಜನೆಯ ಪಾಲು 20 % ಶಾಲಾ ಪಾಲು ಉಪಯೋಗಿಸಿ ವಿತರಿಸಲ್ಪಟ್ಟ ಪೀಠೋಪಕರಣ ಗಳ ಮಂಜೇಶ್ವರ ತಾಲೂಕು ಮಟ್ಟದ ಉದ್ಘಾಟನೆಯನ್ನು ಯೋಜನಾಧಿಕಾರಿ ಶಶಿಕಲಾ ಸುವರ್ಣ GSBS ಕುಂಬಳೆ ಶಾಲೆಯಲ್ಲಿ ನೆರವೇರಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ವಲಯದ ಮೇಲ್ವಿಚಾರಕರಾದ ರಮೇಶ್, ಜನಜಾಗೃತಿ ವೇದಿಕೆಯ ಸದಸ್ಯರಾದ ಮಂಜುನಾಥ ಆಳ್ವ ಮಡ್ವ, ಜನಪ್ರತಿನಿಧಿ ವಿದ್ಯಾ ಪೈ ಕುಂಬಳೆ, ಸೇವಾಪ್ರತಿನಿಧಿ ಹಾಗೂ ಶಾಲೆಯ ಮಾತೃಮಂಡಳಿ ಅಧ್ಯಕ್ಷೆ ಈರಮ್ಮ ಶುಭಾಶಯ ಸಲ್ಲಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಿಜಯ ಕುಮಾರ್ ಪಾವಲ ಸ್ವಾಗತಿಸಿ ಹಿರಿಯ ಶಿಕ್ಷಕಿ ಸರಿತಾ ವಂದಿಸಿದರು.