391
- ಇಲೆಕ್ಟ್ರಿಕ್ ಸ್ಕೂಟರ್ ಹಿಂಭಾಗಕ್ಕೆ ಲಾರಿ ಬಡಿದು ಉಪ್ಪಳದ ಯುವಕನ ಸಾವು, ಅಂಗಡಿಮೊಗರು ನಿವಾಸಿಗೆ ಗಾಯ
ಮಂಜೇಶ್ವರ ಉದ್ಯಾವರದಲ್ಲಿ ಇಲೆಕ್ಟ್ರಿಕ್ ಸ್ಕೂಟರಿನ ಹಿಂಭಾಗಕ್ಕೆ ಲಾರಿ ಬಡಿದು, ಸ್ಕೂಟರಿನ ಹಿಂಬದಿ ಸವಾರ ಮೃತಪಟ್ಟನು. ಉಪ್ಪಳ ಪೇಟೆಯ ಮೊಬೈಲ್ ಅಂಗಡಿಯೊಂದರ ನೌಕರ, ಉಪ್ಪಳ ಕೆದುಂಗಾರು ನಿವಾಸಿ ಮುಹಮ್ಮದ್ ಅನ್ವಾಸ್ (24)ಎಃಬವರು ಮೃತ ವ್ಯಕ್ತಿಯಾಗಿದ್ದಾರೆ. ಸ್ಕೂಟರ್ ಚಲಾಯಿಸುತ್ತಿದ್ದ ಪುತ್ತಿಗೆ ಅಂಗಡಿಮೊಗರು ನಿವಾಸಿ ಫಸಲ್ ರೆಹ್ಮಾನ್ ಗಾಯಗೊಂಡಿದ್ದಾರೆ.
ಮಂಗಳವಾರ ಮುಂಜಾನೆ 4ಗಂಟೆಗೆ ಈ ದುರ್ಘಟನೆ ನಡೆಯಿತು. ಇವರಿಬ್ಬರೂ ಸ್ಕೂಟರ್ ಚಾರ್ಜ್ ಮಾಡಲೆಂದು ಮುಂಜಾವ ತಲಪ್ಪಾಡಿಯ ಚಾರ್ಜಿಂಗ್ ಪಾಯಿಂಟಿಗೆ ತೆರಳುವಾಗ ಅಪಘಾತ ಸಂಭವಿಸಿದೆ. ಲಾರಿಯನ್ನು ಮಂಜೇಶ್ವರ ಪೋಲೀಸರು ವಶ ಪಡಿಸಿ ಕೇಸು ದಾಖಲಿಸಿದ್ದಾರೆ. ಮೃತ ವ್ಯಕ್ತಿ ತಾಯಿ, ಸಹೋದರಿಯನ್ನು ಅಗಲಿದ್ದಾರೆ.