124
ಮಧೂರು ಸಮೀಪದ ಉಳಿಯತ್ತಡ್ಕದಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಆಧೀನದಲ್ಲಿರುವ ಭೂಮಿಯಲ್ಲಿ ನೂತನ ಸಭಾಭವನ ನಿರ್ಮಿಸಲಾಗುತ್ತಿದೆ. ಸುಸಜ್ಜಿತ ಸೌಲಭ್ಯಗಳ ಆಧುನಿಕ ಮಾದರಿಯ ಸಭಾಭವನಕ್ಕೆ ಮಾ.12ರಂದು ಶಿಲಾನ್ಯಾಸ ನಡೆಯಿತು. ಶ್ರೀಎಡನೀರು ಮಠದ ಸಚ್ಛಿದಾನಂದಭಾರತೀ ಶ್ರೀಪಾದಂಗಳು ಮತ್ತು ಸುಬ್ರಹ್ಮಣ್ಯ ಶ್ರೀಗಳು ಜಂಟಿಯಾಗಿ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಸುಬ್ರಹ್ಮಣ್ಯ ಶ್ರೀ. ವಿದ್ಯಾಪ್ರಸನ್ನ ತೀರ್ಥರು ಬ್ರಹ್ಮಕಲಶೋತ್ಸವ ಸಿದ್ಧತೆಯಲ್ಲಿರುವ ಮಧೂರು ಕ಼್ಷೇತ್ರಕ್ಕೆ ಭೇಟಿ ಇತ್ತರು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಶ್ರೀಗಳವರನ್ನು ಬರಮಾಡಿಕೊಂಡರು
ಮಾ.27ರಿಂದ ಮಧೂರು ಬ್ರಹ್ಮಕಲಶ ನಡೆಯಲಿದ್ದು, ಸಮಿತಿ ಪದಾಧಿಕಾರಿಗಳಿಂದ ಶ್ರೀಗಳವರು ಮಾಹಿತಿ ಪಡೆದರು.