369
ಕುಂಬಳೆ : ಸ್ಕೂಟರಿನಲ್ಲಿ ಸಾಗಿಸುತ್ತಿದ್ದ 4. 183 ಕಿಲೋ ತೂಕದ ಬೃಹತ್ ಮೌಲ್ಯದ ಗಾಂಜಾ ಸಹಿತ ಓರ್ವನನ್ನು ಕುಂಬಳೆಯಲ್ಲಿ ಬಂಧಿಸಲಾಗಿದೆ.
ಕುಂಬಳೆ ಮಾವಿನಕಟ್ಟೆ ಹೆದ್ದಾರಿ ಬದಿಯಲ್ಲಿ ವಾಹನ ತಪಾಸಣೆ ನಡೆಸುವಾಗ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಯಿತು. ಸ್ಕೂಟರ್ ಮತ್ತು ಗಾಂಜಾ ಸಹಿತ ಬಂಬ್ರಾಣ ಗ್ರಾಮದ ಸುನಿಲ್ ಕುಮಾರ್ (35) ಎಂಬಾತನನ್ನು ಬಂಧಿಸಿರುವುದಾಗಿ ಕಾಸರಡೋಡು ಅಬಕಾರಿ ದಳ ತಿಳಿಸಿದೆ. ಸ್ಕೂಟರಿನಲ್ಲಿ ಗಾಂಜಾ ಸಾಗಿಸುವ ಸುಳಿವಿನ ಹಿನ್ನೆಲೆಯಲ್ಲಿ ವಾಹನ ತಪಾಸಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಕೇರಳ ರಾಜ್ಯ ವ್ಯಾಪಕ ಮಾದಕ ಲಹರಿ ವಿರುದ್ಧ ನಡೆಯುವ ಬಿರುಸಿನ ಕಾರ್ಯಾಚರಣೆಯಂಗವಾಗಿ ಆರೋಪಿಯನ್ನು ಬಂಧಿಸಲಾಗಿದೆ.