87
- ಆಟದ ಮೈದಾನದಿಂದ ಕಾಣೆಯಾಗುತ್ತಿರುವ ಹೆಣ್ಮಕ್ಕಳು…
- ಮಹಿಳಾ ದಿನಾಚರಣೆ : ಶಿಕ್ಷಕಿಯಿಂದ ಕುಂಬಳೆ ಜಿ.ಎಸ್.ಬಿ.ಎಸ್ ಗೆ ವಾಲಿಬಾಲ್ ಕೊಡುಗೆ
ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯೆಯೂ ರಾಜ್ಯ ಅಧ್ಯಾಪಕರ ಸಂಪನ್ಮೂಲ ವ್ಯಕ್ತಿಯೂ, ಕವಯತ್ರಿಯೂ ಆಗಿರುವ ಕುಂಬಳೆ ಶಾಲೆಯ ಶಿಕ್ಷಕಿ ದೀಪಾ ಪಿ.ಯಂ ಶಾಲೆಯ ಹೆಣ್ಣು ಮಕ್ಕಳಿಗಾಗಿ ವಾಲಿಬಾಲ್ ಉಡುಗೊರೆಯಾಗಿ ನೀಡಿದರು. ಜಿಎಸ್‌ಬಿಎಸ್ ಕುಂಬಳೆಯ ಮುಖ್ಯೋಪಾಧ್ಯಾಯ ವಿಜಯಕುಮಾರ್ ಮತ್ತು ಶಾರೀರಿಕ ತರಬೇತಿ ಶಿಕ್ಷಕಿ ತಂಗಮಣಿ ಟೀಚರ್ ಅವರಿಗೆ ವಾಲಿಬಾಲ್ ಹಸ್ತಾಂತರಿಸಿದರು, ನವಮಾಧ್ಯಮಗಳ ಭರಾಟೆಯಿಂದಾಗಿ ಹುಡುಗಿಯರು ಮೈದಾನದಲ್ಲಿ ಆಡುವುದನ್ನು ಮರೆತು ಬಿಟ್ಟಿದ್ದಾರೆ. ರಕ್ಷಕರೂ ಆಟಕೆ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿ ಕಳುಹಿಸಲು ಹಿಂದೇಟು ಹಾಕುತ್ತಾರೆ. ಇದರಿಂದ ಹುಡಗಿಯರಲ್ಲಿ ಪ್ರತಿರೋಧ ಮನೋಭಾವ ಕುಂಠಿತಗೊಳ್ಳುತ್ತಿದೆ. ಆಟದ ಮೈದಾನವು ಪುರುಷರಿಗೆ ಮಾತ್ರವಲ್ಲದೆ ಹುಡುಗಿಯರಿಗೂ ಸಾರ್ವಜನಿಕ ಸ್ಥಳವಾಗಿದೆ ಎಂಬ ಸಂದೇಶವನ್ನು ನೀಡಿ ಮಹಿಳಾ ಸಬಲೀಕರಣದ ಅಗತ್ಯವನ್ನು ಒತ್ತಿ ಹೇಳಿದರು. ಸಮಾರಂಭವನ್ನು ಪಂಚಾಯಿತಿನ ಸದಸ್ಯೆ ಪ್ರೇಮಾವತಿ ಉದ್ಘಾಟಿಸಿದರು.