ಶ್ರೀರಾಮಚಂದ್ರಾಪುರ ಮಠದ ಮಹಾಪಾದುಕಾ ಪಯಣದ ಅದ್ವೈತ ರಥ ಯಾತ್ರೆಗೆ ಕುಂಬಳೆ ವಲಯದ ಭಕ್ತ್ಯಾದರದ ಸ್ವಾಗತ

ದೈತಾದೈತ ಸಂಗಮಿಸಿದ ಗಡಿನಾಡು ಕೇರಳದಲ್ಲಿ ಶಂಕರ ಭಗವತ್ಪಾದರ ತತ್ವ ಸಂದೇಶದೊಂದಿಗೆ ಚಲಿಸಿತು ಮಹಾಪಾದುಕಾ ರಥ...

by Narayan Chambaltimar
  • ಶ್ರೀರಾಮಚಂದ್ರಾಪುರ ಮಠದ ಮಹಾಪಾದುಕಾ ಪಯಣದ ಅದ್ವೈತ ರಥ ಯಾತ್ರೆಗೆ ಕುಂಬಳೆ ವಲಯದ ಭಕ್ತ್ಯಾದರದ ಸ್ವಾಗತ
  • ದೈತಾದೈತ ಸಂಗಮಿಸಿದ ಗಡಿನಾಡು ಕೇರಳದಲ್ಲಿ ಶಂಕರ ಭಗವತ್ಪಾದರ ತತ್ವ ಸಂದೇಶದೊಂದಿಗೆ ಚಲಿಸಿತು ಮಹಾಪಾದುಕಾ ರಥ…

 

  • ಕಣಿಪುರ ಸುದ್ದಿಜಾಲ,
    ಕುಂಬಳೆ :
    ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಶ್ರೀಪಾದಂಗಳ ಮಾರ್ಗದರ್ಶನದಲ್ಲಿ ಶ್ರೀ ಸಂಸ್ಥಾನದಿಂದ ಚಾಲನೆಗೊಂಡು, ನಾಡಿನುದ್ದಕ್ಕೂ ಪಯಣ ಆರಂಭಿಸಿದ :ಅದ್ವೈತ ರಥ” ಯಾತ್ರೆ ಮಾ.8ರಂದು ದೈತ -ಅದ್ವೈತಗಳ ಸಂಗಮ ಭೂಮಿ ಕುಂಬಳೆ ಸೀಮೆಗೆ ತಲುಪಿತು. ಕರ್ನಾಟಕ -ಕೇರಳ – ತಮಿಳುನಾಡು ರಾಜ್ಯಗಳಲ್ಲಿ ಶಂಕರ ಭಗವತ್ಪಾದರ ದಿವ್ಯ ಸಂದೇಶಗಳೊಂದಿಗೆ ಅದೈತ ಮತ ಪ್ರಚಾರದ ಜನಜಾಗೃತಿ ಮತ್ತು ಶ್ರೀಸಂಸ್ಥಾನದ ಶಂಕರ
    ಪಂಚಮಿ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡ ರಥಯಾತ್ರೆಗೆ ಕುಂಬಳೆ ವಲಯದ ಮಠದ ಶಿಷ್ಯರು, ಅಭಿಮಾನಿಗಳು ಶ್ರೀರಾಮ ತಾರಕ ನಾಮೋಚ್ಛಾರಣೆಯೊಂದಿಗೆ ನಾಯ್ಕಾಪು ಶ್ರೀಶಾಸ್ತಾರ ಬನ, ಶ್ರೀರಾಮ ಭಜನಾ ಮಂದಿರದ ಮುಂಭಾಗ ಭವ್ಯ ಸ್ವಾಗತ
    ನೀಡಿದರು.

ಮಾ.8ರಂದು ಶನಿವಾರ ಕೇರಳ ಪ್ರಾಂತದ
ಗುಂಪೆ ವಲಯದ ಬಾಯಾರು ಮೂಲಕ ಮಹಾಪಾದುಕೆಯನ್ನು ಹೊಂದಿದ ”ಅದ್ವತ ರಥ ” ಕೇರಳದ ಕಾಸರಗೋಡಿಗೆ ಕಾಲೂರಿತ್ತು. ಬಳಿಕ ಧರ್ಮತ್ತಡ್ಕ, ಮಧೂರು, ಕುತ್ಯಾಳ(ಕೂಡ್ಲು)ದಲ್ಲಿ ಸ್ವಾಗತ ಪಡೆದು, ಸಂಜೆ ಕುಂಬಳೆ ವಲಯದ ನಾಯ್ಕಾಪು ಼಼ಬತಲುಪಿತು. ಈ ಸಂದರ್ಭ ಕುಂಬಳೆ ವಲಯಾಧ್ಯಕ್ಷ ಡಾ.ಡಿ.ಪಿ.ಭಟ್ ಸ್ವಾಗತಿಸಿದರು.
ಗ್ರಾ.ಪಂ ಸದಸ್ಯ ಅಜಯ ನಾಯ್ಕಾಪು ಮಹಾ ಪಾದುಕೆಗೆ ಪುಷ್ಪಾರ್ಚನೆ ಮತ್ತು ಗ
ಗ್ರಾ.ಪಂ ಸದಸ್ಯ ಸರೋಜಿನಿ ಫಲ ಸಮರ್ಪಿಸಿದರು. ವಲಯದ ಮಾತೆಯರು ಪ್ರಾರ್ಥನೆ ಹಾಡಿದರು.

ಸ್ಥಳೀಯ ಮುಂದಾಳು ಮುರಳೀಧರ ಯಾದವ್, ನಿವೃತ್ತ ಅಧ್ಯಾಪಕ ಬಾಲಕೃಷ್ಣ ಶರ್ಮ ಅದ್ವೈತ ರಥಯಾತ್ರೆ ಕುರಿತು ಮಾತನಾಡಡಿದರು. ರವಿಶಂಕರ ನೆಗಳಗುಳಿ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು. ಭಾನುವಾರ ಕುಂಬಳೆ ಮೊಕ್ಕಾಂ ನಿಂದ ತೆರಳುವ ಯಾತ್ರೆ ಬದಿಯಡ್ಕ, ಮುಳ್ಳೇರಿಯ, ಚಂದ್ರಗಿರಿ ವಲಯದಲ್ಲಿ ಸ್ವಾಗತ ಪಡೆದು ಕರ್ನಾಟಕಕ್ಕೆ ಮರಳಲಿದೆ.
ಭಾನ್ಕುಳಿ ಮಠದ ಶಂಕರಪಂಚಮಿ ಪ್ರಚಾರಾರ್ಥ ಈ ಅಭಿಯಾನ ನಡೆಯುತ್ತಿದ್ದು, ಕೇರಳ ದ ಹವ್ಯಕ ಸಮಾಜ,ರಥಪಥವನ್ನು ಗೌರವದಿಂದ ಬರಮಾಡಿದ್ದಾರೆ.

ಕುಂಬಳೆ ಸೀಮೆಯ ಕೂಡ್ಲು ಎಂಬ ಊರು ದೈತ ಅದ್ವೈತ ಸಿದ್ಧಾಂತಗಳ ಘನಘೋರ ಸಂವಾದ ನಡೆದು ದೈತವು ಅದ್ವೈತವನ್ನೊಪ್ಪಿಕೊಂಡ ನಾಡು. ಈ ಎರಡರ ಕೂಡುವಿಕೆಯಿಂದಲೇ ಇಲ್ಲಿಗೆ ಕೂಡಲು(ಕೂಡ್ಲು) ಎಂಬ ಹೆಸರು ಬಂದಿದೆ. ಇದು ತ್ರಿವಿಕ್ರಮ ಪಂಡಿತಾಚಾರ್ಯರ ದೈತ ನೆಲವೊಂದು ಪರಿವರ್ತನೆ ಕಂಡ ಕಥನ. ಇಂಥ ನೆಲದಲ್ಲಿ ಶಂಕರ ಪಂಚಮಿ ಪ್ರಯುಕ್ತವಾದ ಅದೈತ ರಥವೊಂದು ಅಬ್ಬರದ ಪ್ರಚಾರಗಳಿಲ್ಲದೇ ಸಾಗಿ ಹೋಗಿದೆ..

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00