ಕಾಸರಗೋಡು: ಕನ್ನಡದಿಂದ ಮಲಯಾಳಂ ಭಾಷೆಗೆ ಅನುವಾದ ಮಾಡಿರುವುದನ್ನು ಪುರಸ್ಕರಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿಗೆ ಅರ್ಹರಾದ ಕಾಸರಗೋಡಿನ ಕೆ.ವಿ. ಕುಮಾರನ್ ಅವರನ್ನು ಬಿಜೆಪಿ ಅಭಿನಂದಿಸಿದೆ.
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಸಿ.ಕೆ
ಪದ್ಮನಾಭನ್, ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ರಾಜ್ಯ ಸದಸ್ಯ ವಿ.ರವೀಂದ್ರನ್, ಪಿ.ಆರ್.ಸುನಿಲ್, ಕೆ..ಎಸ್.ಭಟ್ ಮೊದಲಾದವರು ವಿದ್ಯಾನಗರದ ಅವರ ಮನೆಗೆ ತೆರಳಿ ಪಕ್ಷದ ಗೌರವ, ಅಭಿನಂದನೆ ಸಲ್ಲಿಸಿದರು.
ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ಯಾನ ಕಾದಂಬರಿಯನ್ನು ಮಲಯಾಳಕ್ಕೆ ಅನುವಾದ,ಮಾಡಿರುವುದನ್ನು ಪರಿಗಣಿಸಿ ಕೇಂದ್ರ ಸಾಹಿತ್ಯ ಅಕಾಡಮಿ ಅನುವಾದ ಪ್ರಶಸ್ತಿ ಘೋಷಿಸಿದೆ. ನಿವೃತ್ತ ಶಿಕ್ಷಣಾಧಿಕಾರಿಯಾದ ಕೆ.ವಿ.ಕುಮಾರನ್ ಅವರಿಗೆ 2024ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿಯ ಸಮಗ್ರ ಕೊಡುಗೆಗೆ ಉಳ್ಳ ರಾಜ್ಯ ಪ್ರಶಸ್ತಿಯೂ ದೊರೆತಿತ್ತು. ಕನ್ನಡ, ಹಿಂದಿ ಭಾಷೆಗಳಿಂದ ಅನೇಕ ಕೃತಿಗಳನ್ನು ಮಲಯಾಳಕ್ಕೆ ನೀಡಿರುವ ಅವರು ಕಾಸರಗೋಡಿನ ವಿದ್ಯಾನಗರದ ಪ್ರಿನ್ಸ್ ಅವೆನ್ಯೂ ಕಾಲನಿಯ ನಿವಾಸಿ.