- ನೀವು ಕಾಡುಹಂದಿಯನ್ನು ಗೂಂಡಿಕ್ಕಿ ಕೊಲ್ಲುವ ಕೌಶಲ್ಯ ಹೊಂದಿದ್ದೀರಾ…?ಹಾಗಿದ್ದರೆ ಕೇರಳ ಸರಕಾರ ಅವಕಾಶ ನೀಡಿದೆ. ಹಂದಿಯನ್ನು ಗುಂಡಿಟ್ಟು ಕೊಂದು ಸಂಸ್ಕರಿಸಿದರೆ ಗೌರವಧನವನ್ನೂ ಪ್ರಕಟಿಸಿದೆ.
ಕಾಡಿನಿಂದ ನಾಡಿಗಿಳಿದು ಕೃಷಿಗೆ ಸಹಿತ ನಾಗರಿಕ ಜನಜೀವನಕ್ಕೆ ಉಪಟಳ ನೀಡುವ ಕಾಡುಹಂದಿಗಳನ್ನು ಗುಂಡಿಟ್ಟು ಕೊಲ್ಲುವ ಅಂಗೀಕೃತ ಶೂಟರ್ ಗಳಿಗೆ ಕೇರಳ ಸರಕಾರ ಗೌರವಧನ ನೀಡುವುದಾಗಿ ಘೋಷಿಸಿದೆ. ಹಂದಿಯನ್ನು ಕೊಂದರೆ 1500ರೂ ಮತ್ತು ಅದರ ಶವವನ್ನು ಶಾಸ್ತ್ರೀಯ ರೀತಿಯಲ್ಲಿ ಸಂಸ್ಕರಿಸಿದರೆ 2ಸಾವಿರ ರೂ ಗೌರವಧನ ನೀಡುವುದಾಗಿ ಪ್ರಕಟಿಸಲಾಗಿದೆ. ಜಿಲ್ಲಾ ದುರಂತ ನಿವಾರಣ ಪ್ರಾಧಿಕಾರವು ಈ ಮೊಬಲಗನ್ನು ಸ್ಥಳೀಯಾಡಳಿತ ಸಂಸ್ಥೆಗೆ ನೀಡಲಿದೆ. ಗ್ರಾಮ ಪಂಚಾಯತ್ ಕಾರ್ಯದರ್ಶಿ ಹಂದಿಗೆ ಗುಂಡಿಕ್ಕಿ ಕೊಂದು, ಶವ ಸಂಸ್ಕರಿಸಿರುವುದನ್ನು ದೃಢೀಕರಿಸಿ ಗೌರವಧನ ನೀಡಬೇಕಾಗಿದೆ.
ಹಾಗೆಂದು ಕಂಡವರೆಲ್ಲಾ ಹಂದಿಯನ್ನು ಕೊಲ್ಲುವಂತಿಲ್ಲ. ಗ್ರಾ.ಪಂ. ಕಾರ್ಯದರ್ಶಿಗಳಿಂದ ಅಂಗೀಕೃತ ಅನುಮತಿ ಪಡೆದ ಶಾರ್ಪ್ ಶೂಟರ್ ಗಳು ಮಾತ್ರವೇ ಹಂದಿಗಳಿಗೆ ಗುಂಡಿಟ್ಟು ಕೊಲ್ಲಬಹುದಾಗಿದೆ.
ಕೇರಳ ರಾಜ್ಯ ವ್ಯಾಪಕ ಹಂದಿಗಳ ಉಪಟಳ ನಿಯಂತ್ರಣಾತೀತವಾಗಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ದುರಂತ ನಿವಾರಣಾ ಪ್ರಾಧಿಕಾರ ಈ ಆದೇಶ ಹೊರಡಿಸಿದೆ.