ಕುಂಬಳೆ: ಶ್ರೀಶಂಕರ ಭಗವತ್ಪಾದರ ತತ್ವ ಸಂದೇಶಗಳ ಪ್ರಚಾರಕ್ಕಾಗಿ ಹೊಸನಗರ ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಪರ್ಯಟನೆ ನಡೆಸುವ “ಮಹಾ ಸ್ವರ್ಣ ಪಾದುಕಾ ಯಾತ್ರೆ” ಮಾ.8ರಂದು ಕುಂಬಳೆಯ ನಾಯ್ಕಾಪಿಗೆ ಆಗಮಿಸಲಿದೆ. ಸಂಜೆ 4ಕ್ಕೆ ನಾಯ್ಕಾಪು ಶಾಸ್ತಾರ ವನದ ಪರಿಸರದಲ್ಲಿ ಜರಗುವ ಜನಜಾಗೃತಿ ಸಭೆಗೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.
ನಾಡಿನಾದ್ಯಂತ ಪರ್ಯಟನೆ ನಡೆಸುವ ಶ್ರೀ ರಾಮಚಂದ್ರಾಪುರ ಮಠದ ಅವಿಚ್ಛಿನ್ನ ಗುರುಪರಂಪರೆಯ ಸ್ವರ್ಣ ಪಾದುಕಾ ಯಾತ್ರೆಯು ಕುಂಬಳೆ ವಲಯಕ್ಕೆ ಫೆ.28ರಂದು ಆಗಮಿಸಿತ್ತು.
ಮಾಣಿ ಮಠದಿಂದ ಶೇಡಿಗುಮ್ಮೆ ಉದನೇಶ್ವರ ಪ್ರಸಾದ ಇಶರ ಮನೆಗೆ ಆಗಮಿಸಿದ ಪಾದುಕಾ ಸವಾರಿಗೆ ಪೂರ್ಣ ಕುಂಭ ಸ್ವಾಗತದೊಂದಿಗೆ ಪೂಜೆ ನಡೆಸಲಾಯಿತು.
ಬಳಿಕ ಕಾನ ಶ್ರೀಶಂಕರನಾರಾಯಣ ಮಠದಲ್ಲಿ ಹಿಳ್ಳೆಮನೆ ಶ್ರೀಪತಿ ಪದ್ಮನಾಭ ಭಟ್ ದಂಪತಿಯರು ಧೂಳೀ ಪೂಜೆ ನೆರವೇರಿಸಿದರು.
ವಲಯಾಧ್ಯಕ್ಷ ಡಿ. ಪುರುಷೋತ್ತ ಭಟ್ ಸ್ವಾಗತಿಸಿದರು. ಶ್ರೀಮಠದ ಆಚಾರವಿಚಾರ ಗಜಾನನ ಭಟ್ ಪಾದುಕಾ ಸವಾರಿಯ ಧ್ಯೇಯೋದ್ದೇಶ ವಿವರಿಸಿದರು.
ಕುಂಬಳೆ ವಲಯ ಘಟಕ ಪ್ರಧಾನರಾದ ಕಾಕುಂಜೆ ವೆಂಕಟ್ರಮಣ ಭಟ್ ಅವರನ್ನು ಅಭಿನಂದಿಸಲಿಯಿತು.
ಅಪರಾಹ್ನ ಸೂರಂಬೈಲು, ಪೆರ್ಣೆ, ದೊಡ್ಡಮಾಣಿ ಈ ಮೂರು ಘಟಕಗಳ ಶಿಷ್ಯ ಬಃಧುಗಳಿಂದ ಪಾದುಕ ಪೂಜೆ ಜರುಗಿತು.