76
ಬಂದಡ್ಕ: ಬಂದಡ್ಕದಲ್ಲಿ ನಿರ್ಮಿಸಿದ ಕುತ್ತಿಕೋಲ್ ಪಂಚಾಯತ್ ಬಿಜೆಪಿ ಘಟಕದ ನೂತನ ಕಾರ್ಯಾಲಯವನ್ನು ಕೇಂದ್ರ ಪೆಟ್ರೋಲಿಯಂ ಖಾತೆ ಸಹ ಸಚಿವ ಸುರೇಶ್ ಗೋಪಿ ಉದ್ಘಾಟಿಸಿದರು.
ನೂತನ ಕಟ್ಟಡವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅವರು “ಪಕ್ಷಕ್ಕೊಂದು ಸುಸಜ್ಜಿತ ಕಚೇರಿ ಹೊಂದುವ ಮೂಲಕ ಪಕ್ಷಕ್ಕೆ ಕುತ್ತಿಕೋಲ್ ಪಂಚಾಯತಿನಲ್ಲಿ ನವತೇಜಸ್ಸು ಸಿಗಲಿ, ಕಾರ್ಯಕರ್ತರು ಚಟುವಟಿಕೆಯನ್ನು ಊರ್ಜೀತಗೊಳಿಸಲಿ ಎಂದು ಹಾರೈಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ , ಕಾರ್ಯಾಲಯ ನಿರ್ಮಾಣ ಸಮಿತಿ ಅಧ್ಯಕ್ಷ ಮಹೇಶ್ ಗೋಪಾಲ್, ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್, ಪ್ರಮೀಳ ಸಿ.ನಾಯಕ್, ಮನುಲಾಲ್ ಮೇಲತ್ತ್, ದಿಲೀಪ್ ಪಳ್ಳಂಜಿ, ಜಯಕುಮಾರ್, ಶಶಿ ಕುಮಾರ್, ರಾಧಾಕೃಷ್ಣನ್ ನಂಬಿಯಾರ್, ಚರಣ್ ಕುಮಾರ್ ಮೊದಲಾದವರು ಉಪಸ್ಥಿತರಿದರು.