- ಕಾಸರಗೋಡಿನ ರೋಟರಿ ಕ್ಲಬ್ ನಾಲ್ಕು ದಶಕಗಳನ್ನು ದಾಟಿದೆ. ಯಶಸ್ವಿ ಚಟುವಟಿಕೆಗಳ ಸಕ್ರಿಯತೆಯಿಂದ ಸಮಾಜಮುಖಿ ಧೋರಣೆಯಿಂದ ಸಾಗುವ ರೋಟರಿ ಕ್ಲಬ್ ತನ್ನ ಚಟುವಟಿಕೆ ವಿಸ್ತರಿಸಿ, ಸಂಘಟನೆ ಬಲಪಡಿಸುವ ಗುರಿಯೊಂದಿಗೆ 40ರ ಆಚರಣೆಯನ್ನು ಸಂಭ್ರಮಿಸಿತು.
ಕಾಸರಗೋಡು : ನಗರದ ರೋಟರಿ ಕ್ಲಬ್ ತನ್ನ 40ನೇ ಚಾರ್ಟರ್ ದಿನವನ್ನು ಮಾರ್ಚ್ 6 ರಂದು ಕಾಸರಗೋಡಿನ ರೋಟರಿ ಭವನದಲ್ಲಿ ಅದ್ಧೂರಿಯಾಗಿ ಆಚರಿಸಿ ಸಂಭ್ರಮಿಸಿತು. ಈ ಸಂದರ್ಭ ಕ್ಲಬ್‌ನ ಹಿಂದಿನ ಅಧ್ಯಕ್ಷರು ಮತ್ತು ಟಿಆರ್‌ಎಫ್ ದಾನಿಗಳನ್ನು ಸನ್ಮಾನಿಸಲಾಯಿತು. ಆಚರಣೆಯ ಭಾಗವಾಗಿ ಕೇಕ್ ಕತ್ತರಿಸುವುದು, ಕುಟುಂಬ ಸಭೆ ಮತ್ತು ಮನರಂಜನೆ ನಡೆಯಿತು. ರೋಟರಿ ಪ್ರಮುಖ ದಾನಿ ಡಾ. ಬಿ. ನಾರಾಯಣ ನಾಯಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ರೊಟೆರಿಯನ್ ದಿನೇಶ್ ಎಂ.ಟಿ ಸ್ವಾಗತಿಸಿ, ರೋಟರಿ ಕಾಸರಗೋಡಿನ ಸಂಕ್ಷಿಪ್ತ ಇತಿಹಾಸವನ್ನು ನೀಡಿದರು. ಕಾಸರಗೋಡು ರೋಟರಿ ಕ್ಲಬ್ ಅದ್ಯಕ್ಷರು ರೋಟರಿ ಮಹಾದಾನಿ ಡಾ. ಬಿ. ನಾರಾಯಣ ನಾಯ್ಕ್ ತಮ್ಮ ಭಾಷಣದಲ್ಲಿ ಹಿಂದಿನ ಅಧ್ಯಕ್ಷರು ತಮ್ಮ ಅವಧಿಯಲ್ಲಿ ಮಾಡಿದ ಶ್ಲಾಘನೀಯ ಕಾರ್ಯಗಳಿಗಾಗಿ ಅವರನ್ನು ಶ್ಲಾಘಿಸಿದರು ಮತ್ತು ಈ ವರ್ಷದ ಕ್ಲಬ್ ಚಟುವಟಿಕೆಗಳನ್ನು ವಿವರಿಸಿದರು. ಮುಂಬರುವ ವರ್ಷಗಳಲ್ಲಿ ರೋಟರಿಗೆ ಎಲ್ಲಾ ಯಶಸ್ಸನ್ನು ಹಾರೈಸಿದರು. ಜಿಲ್ಲಾ ಗವರ್ನರ್ ನಾಮನಿರ್ದೇಶಿತ ರೋಟರಿಯನ್ ದೀಪಕ್ ನಾಯರ್ ಮುಖ್ಯ ಅತಿಥಿಯಾಗಿದ್ದರು ಮತ್ತು ಅವರು ಕ್ಲಬ್ ಮತ್ತು ಅದರ ಚಟುವಟಿಕೆಗಳನ್ನು ಶ್ಲಾಘಿಸಿದರು ಮತ್ತು ಕ್ಲಬ್‌ಗೆ ಶುಭ ಹಾರೈಸಿದರು.
ಝೋನಲ್
ಕೋರ್ಡಿನೇಟರ್ ರೋಟೆರಿಯನ್ ಎಂ. ಕೆ ರಾಧಾಕೃಷ್ಣನ್ ಮಾತನಾಡಿ ರೋಟರಿ ಕ್ಲಬ್ ಬಿಕ್ಕಟ್ಟಿನ ಸಮಯಗಳಲ್ಲಿ ಸಮಯೋಚಿತವಾಗಿ ಕ್ಲಬ್ಬನ್ನು ಉಳಿಸುವಲ್ಲಿ ಹಿಂದಿನ ಅದ್ಯಕ್ಷರು ಗಳ ಪಾತ್ರ ವನ್ನು ನೆನಪಿಸಿದರು ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಗವರ್ನರ್ ರೋಟರಿಯನ್ ಹರೀಶ್ ವಿ. ವಿ ಶುಭ ಹಾರೈಸಿದರು. ರೊಟೇರಿಯನ್ ಬೆನ್ನಿ ಜೋಸ್ ಹಿಂದಿನ ಅಧ್ಯಕ್ಷರ ಪರವಾಗಿ ಮಾತನಾಡಿದರು ಮತ್ತು ಎಲ್ಲಾ ಹಿಂದಿನ ಅಧ್ಯಕ್ಷರು ಕ್ಲಬ್ ಅನ್ನು ಬೆಂಬಲಿಸಲು ಬಲವಾದ ಸ್ತಂಭಗಳಾಗಿ ರೋಟರಿಯ ಹಿಂದೆ ನಿಲ್ಲಬೇಕೆಂದು ವಿನಂತಿಸಿದರು. ಪಿಡಿಜಿ ರೋಟರಿ ಪ್ರಮುಖ ದಾನಿ ಡಾ. ಹರಿಕೃಷ್ಣನ್ ನಂಬಿಯಾರ್ ಮುಖ್ಯ ಅತಿಥಿಯನ್ನು ಶಾಲು ಹೊದಿಸಿ ಗೌರವಿಸಿದರು. ,ಕಾಸರಗೋಡಿನ ರೋಟರಿ ಕ್ಲಬ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಜಾಗತಿಕ ಅನುದಾನ ಯೋಜನೆಯನ್ನು ಮಾಡಿದ್ದಕ್ಕಾಗಿ ( ಗ್ಲೋಬಲ್ ಗ್ರಾಂಟ್)ಮತ್ತು ರೋಟರಿ ಫೌಂಡೇಶನ್‌ಗೆ ನೀಡಿದ ಉದಾರ ಕೊಡುಗೆಗಾಗಿ ರೋಟರಿ ಪ್ರಮುಖ ದಾನಿ ಡಾ. ಬಿ. ನಾರಾಯಣ ನಾಯ್ಕ್ ರನ್ನು ಮುಖ್ಯ ಅತಿಥಿ ರೋಟರಿ ದೀಪಕ್ ನಾಯರ್ ಸನ್ಮಾನಿಸಿದರು. ,
ರೋಟರಿ ಫೌಂಡೇಶನ್‌ಗೆ ಉದಾರ ಕೊಡುಗೆ ನೀಡಿ
ಪಾಲ್ ಹ್ಯಾರಿಸ್ ಫೆಲೋ ಬಿರುದ ಸಿಕ್ಕಿದ ರೋಟೇರಿಯನ್ ಗೋಕುಲ್ ಚಂದ್ರ ಬಾಬು, ರೋಟೇರಿಯನ್ ಹರಿಪ್ರಸಾದ್ ಕೆ, ರೋಟೇರಿಯನ್ ಮುರಳೀಧರ್ ಕಾಮತ್ ಅವರನ್ನು ಅಧ್ಯಕ್ಷರು ಗೌರವಿಸಿದರು. ರೊಟೆರಿಯಾನ್ ಡಾಕ್ಟರ್ ಜಿತೇಂದ್ರ ರೈ ರೋಟರಿ ಪ್ರಾರ್ಥನೆ ಮಾಡಿದರು
ಕಾರ್ಯದರ್ಶಿ ರೋಟೇರಿಯನ್ ಹರಿಪ್ರಸಾದ್ ಕೆ ಧನ್ಯವಾದ ವಿತ್ತರು. ಬಳಿಕ ಚಾರ್ಟರ್ ಮೆಂಬರ್ ರೋಟೇರಿಯಾನ್ ಅಡ್ವೊಕೇಟ್ ಕೆ ಎನ್ ಶೆಟ್ಟಿ ಕೇಕ್ ಕತ್ತರಿಸಿದರು ಮತ್ತು ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು