116
- ಅನ್ಯ ರಾಜ್ಯ ಕಾರ್ಮಿಕರ ನೆಪದಲ್ಲಿ ನೆಲೆಸಿ ದರೋಡೆ ನಡೆಸಿದ ದುಷ್ಕರ್ಮಿಗಳು
- ದರೋಡೆ ನಡೆಸಿ ಮಂಗಳೂರಿಗೆ ಪರಾರಿ, ಬಿಹಾರಕ್ಕೆ ಮರಳಲು ಯತ್ನ
ಕಲ್ಲಿನ ಕೋರೆಯ ಮೇನೇಜರ್ ತೆರಳುವಾಗ ಕೋವಿ ತೋರಿಸಿ ಅಡ್ಡಗಟ್ಟಿ, ಬೆದರಿಸಿ ಕೈವಶವಿದ್ದ 10.20ಲಕ್ಷ ರೂ ದರೋಡೆ ಮಾಡಿದ ಘಟನೆ ನಡೆದಿದೆ
ಕಾಸರಗೋಡು ಜಿಲ್ಲೆಯ ಕಾಞಂಗಾಡಿನ ಏಚಿಕಾನಂ ಎಂಬಲ್ಲಿ ಕಾರ್ಯಾಚರಿಸುವ ಕಗ್ಗಲ್ಲಿನ ಕೋರ
ರೆ ಮತ್ತು ಕಾಞಂಗಾಡು ನಗರದ ಪ್ರಿಯಾ ಮೆಟಲ್ಸ್ ಸಂಸ್ಥೆಯ ಮೇನೇಜರ್ ಪ್ರಯಾಣಿಸುವಾಗ ನಿನ್ನೆ ಸಂಜೆ 6ರ ವೇಳೆ ಘಟನೆ ನಡೆದಿದೆ.
ಕೋವಿ ತೋರಿಸಿ ಬೆದರಿಸಿ ಕೈವಶ ಇದ್ದ 10ಲಕ್ಷಕ್ಕೂ ಅಧಿಕ ನಗದನ್ನು ಅಪಹರಿಸಲಾಯಿತು.
ಕೂಡಲೇ ಹೊಸದುರ್ಗ ಪೋಲೀಸರಿಗೆ ತಿಳಿಸಿದ ಮೇರೆಗೆ ಪೋಲೀಸರು ಪರಿಸರದ ಸಿಸಿಟಿವಿ ಗಳನ್ನು ತಪಾಸಿಸಿ ದರೋಡೆಗೈದವರನ್ನು ಗುರುತಿಸಿದರು. ಬಳಿಕ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಿಹಾರ ನಿವಾಸಿಗಳಾದ ಐವರನ್ನು ಮಂಗಳೂರಿನಿಂದ ಹೊಸದುರ್ಗ ಪೋಲೀಸರು ರಾತ್ರಿಯೇ ಬಂಧಿಸಿದ್ದಾರೆ. ಬಂಧಿತರಿಂದ 10ಲಕ್ಷ ರೂ ವಶಪಡಿಸಲಾಗಿದೆ. ಪ್ರಕರಣದ ಆರೋಪಿಗಳನ್ನು ರಾತ್ರಿಯೇ ಹೊಸದುರ್ಗ ಠಾಣೆಗೆ ತರಲಾಗಿದ್ದು, ವಿಚಾರಣೆ ನಡೆಯುತ್ತಿದೆ.