- ಹೆಚ್ಚುತ್ತಿರುವ ಕ್ರಿಮಿನಲ್ ಪ್ರಕರಣ :ದೂರವಾಗುತ್ತಿರು ಪೋಲೀಸ್ ಠಾಣೆ
- ಮಂಜೇಶ್ವರ ಠಾಣೆ ವಿಭಜಿಸಿ ಪೈವಳಿಕೆಯಲ್ಲಿ ನೂತನ ಠಾಣೆ ಆರಂಭಿಸಲು ಬಿಜೆಪಿ ಒತ್ತಾಯ
ಕಾಸರಗೋಡು ಜಿಲ್ಲೆಯ ವಿಶೇಷ ಹಿನ್ನೆಲೆ ಮತ್ತು ಗಡಿಪ್ರದೇಶದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳು ವರ್ಧಿಸುತ್ತಿರುವುದನ್ನು ಪರಿಗಣಿಸಿ ಮಂಜೇಶ್ವರ ಪೋಲೀಸ್ ಠಾಣೆ ವಿಭಜಿಸಿ ಪೈವಳಿಕೆಯಲ್ಲಿ ಪ್ರತ್ಯೇಕ ಪೋಲೀಸ್ ಠಾಣೆ ಕೂಡಲೇ ಸ್ಥಾಪಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಒತ್ತಾಯಿಸಿದ್ದಾರೆ.
2019ರಲ್ಲಿ ಡಾ.ಎ.ಶ್ರೀನಿವಾಸನ್ ಜಿಲ್ಲಾ ಪೋಲೀಸ್ ವರಿಷ್ಟರಾಗಿದ್ದಾಗ ಉಪ್ಪಳ ಕೇಂದ್ರೀಕರಿಸಿ ಪೋಲೀಸ್ ಠಾಣೆ ಸ್ಥಾಪಿಸಬೇಕೆಂದು ಸರಕಾರವನ್ನು ಒತ್ತಾಯಿಸಿದ್ದರೂ ಫಲಶ್ರುತಿಯಾಗಿರಲಿಲ್ಲ. ಪ್ರಸ್ತುತ ಮಂಜೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ 24 ಗ್ರಾಮಗಳಿದ್ದು, ಈ ಪ್ರದೇಶವಾಸಿಗಳಿಗೆ ಪೋಲೀಸ್ ಠಾಣೆ ತಲುಪಲು ದೂರವಾಗುತ್ತಿದೆ. ಅಲ್ಲದೇ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಎಂಡಿಎಂಎ, ಗಾಂಜಾ ಮಾಫಿಯಾ ನಡೆಯುತ್ತಿದ್ದು ಕ್ರಿಮಿನಲ್ ಪ್ರಕರಣಗಳು ವ್ಯಾಪಕವಾಗುತ್ತಿದೆ. ಇದಕ್ಕೆ ನಿಯಂತ್ರಣ ಹೇರಿ ಶಾಂತಿಪಾಲನೆಗಾಗಿ ಸಾರ್ವಜನಿಕ ಸಹಕಾರಿಯಾಗಲು ಮಂಜೇಶ್ವರ ಠಾಣಾ ವ್ಯಾಪ್ತಿ ವಿಭಜಿಸಿ, ಪೈವಳಿಕೆಯಲ್ಲಿ ಕೃಡಲೇ ನೂತನ ಪೋಲೀಸ್ ಠಾಣೆ ಸ್ಥಾಪಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.