ಹಾವನ್ನೇ ನುಂಗಿದ ಕಪ್ಪೆ..! ಕಾಸರಗೋಡಲ್ಲೊಂದು ವಿಚಿತ್ರ, ವಿಲಕ್ಷಣ ಘಟನೆ…

by Narayan Chambaltimar

ಇದು ಕಲಿಯುಗದ ಕಲಿಗಾಲ ಎಂದದ್ದು ಸುಮ್ಮನೇನಲ್ಲ…
ಏಕೆಂದರೆ ಕಪ್ಪೆಯೊಂದು ನಿರ್ಭೀತಿಯಿಂದ ಹಾವೊಂದನ್ನು ನುಂಗಿ ತೇಗು ಹಾಕಿದೆ!!


ಇಂಥ ಅಪೂರ್ವ ಘಟನೆಯ ದೃಶ್ಯ ವಿಸ್ಮಯವೊಂದು ಕಾಸರಗೋಡು ಜಿಲ್ಲೆಯ ಬಂದಡ್ಕ ಸಮೀಪ ನಡೆದಿದೆ.
ಪನತ್ತಡಿ ಕೃಷಿ ಭವನದ ಉದ್ಯೋಗಿ ಸಿ. ಚಕ್ರಪಾಣಿ ಎಂಬವರು ಕುತ್ತಿಕೋಲ್ ಪಳ್ಳಂಜಿಯಲ್ಲಿರುವ ಮನೆಯಲ್ಲಿ ಇಂದು ಬೆಳಿಗ್ಗೆ ಗಿಡಗಳಿಗೆ ನೀರುಣಿಸುತ್ತಿದ್ದರು. ಈ ಸಂದರ್ಭ ಸಮೀಪದ ಕೆರೆಯ ಮೆಟ್ಟಿಲಿನ ಮೇಲೆ ದೊಡ್ಡ ಗಾತ್ರದ ಕಪ್ಪೆಯೊಂದು ಆತುರಗಳೇನೂ ಇಲ್ಲದೇ ಹಾವೊಂದನ್ನು ನುಂಗುವುದನ್ನು ಕಂಡರು.
ಕೂಡಲೇ ಮನೆಗೆ ಓಡಿ ಬಂದು ಅಪೂರ್ವ ದೃಶ್ಯವನ್ನು ವಿವರಿಸಿದರೆ ಮನೆ ಮಂದಿ ನಂಬಬೇಕೇ..?
ಅವರನ್ನೇ ಗೇಲಿ ಮಾಡಿದರು. ಈ ವೇಳೆ ಮೊಬೈಲ್ ಫೋನ್ ಕೊಂಡೊಯ್ದು ಅದರ ದೃಶ್ಯ ಚಿತ್ರೀಕರಿಸಿಕೊಂಡರು. ಆದರೆ ಕಪ್ಪೆ ನುಂಗಿದ್ದು ಯಾವ ವರ್ಗದ ಹಾವೆಂದು ಗೊತ್ತಾಗಲಿಲ್ಲ..

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00