- ವಾಟ್ಸಪ್ ನಲ್ಲಿ ತಲಾಖ್ ಹೇಳಿ ವಿಚ್ಛೇದನ : ಪತಿ ಮತ್ತು ಮನೆಯವರ ವಿರುದ್ಧ ಕೇಸು ದಾಖಲು
- ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧ ಕಾನೂನು ಚಾಲ್ತಿಗೆ ಬಂದ ಬಳಿಕ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾಗುವ ಮೊದಲ ಪ್ರಕರಣ
ವಾಟ್ಸಪ್ ಸಂದೇಶದ ಮೂಲಕ ‘ತಲಾಖ್’ ಹೇಳಿ ಪತ್ನಿಯನ್ನು ವಿಚ್ಛೇದನಗೈದ ಪತಿಯ ವಿರುದ್ಧ ಪತ್ನಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಹೊಸದುರ್ಗ ಪೋಲೀಸರು ಪ್ರಕರಣ ದಾಖಲಿಸಿದ್ದು, ಮುತ್ತಲಾಖ್ ನಿಷೇಧ ನಿಯಮ ಚಾಲ್ತಿಗೆ ಬಂದ(2019) ಬಳಿಕ
ಕಾಸರಗೋಡು ಜಿಲ್ಲೆಯಲ್ಲಿ ದಾಖಲಾಗುವ ಮೊದಲ ಪ್ರಕರಣ ಇದಾಗಿದೆ.
ಕಾಞಂಗಾಡಿನ ಕಲ್ಲೂರಾವಿ ನಿವಾಸಿ ಸಿ.ಎಚ್ ನುಸೈಬಾ(21)ನೀಡಿದ ದೂರಿನಂತೆ ವಿದೇಶದಲ್ಲಿರುವ ಆಕೆಯ ಪತಿ, ಬದಿಯಡ್ಕ ಠಾಣಾ ವ್ಯಾಪ್ತಿಯ ನೆಲ್ಲಿಕಟ್ಟೆ ನಿವಾಸಿ ಅಬ್ದುಲ್ ರಜಾಕ್( 29) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮುಸ್ಲಿಂ ಮಹಿಳಾ ಸಂರಕ್ಷಣ ಕಾನೂನು ದೇಶದಲ್ಲಿ ಚಾಲ್ತಿಗೆ ಬಂದ ಬಳಿಕ ದಾಖಲಾಗುವ ಮೊದಲ ಪ್ರಕರಣ ಇದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದ ಮಹಿಳೆಯ ಪತಿ, ಅತ್ತೆ, ನಾದಿನಿಯರ ವಿರುದ್ದ ಕೇಸು ದಾಖಲಿಸಲಾಗಿದೆ.
ವಿದೇಶದಲ್ಲಿರುವ ಪತಿ ತನ್ನ ತಂದೆಯ ಫೋನಿಗೆ ಫೆ.21ರಂದು ವಾಟ್ಸಪ್ ಸಂದೇಶ ಮೂಲಕ “ಮೂರು ಬಾರಿ ತಲಾಖ್ ಹೇಳಿದ್ದೇನೆಂದೂ, ಆಕೆ ತನಗೆ ಬೇಡ” ಎಂದು ವಿಚ್ಛೇದನ ನೀಡಿರುವುದಾಗಿ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. 2022 ಆಗಸ್ಟ್ ತಿಂಗಳಲ್ಲಿ ಇವರ ವಿವಾಹ ನಡೆದಿತ್ತು. ಬಳಿಕ ವರದಕ್ಷಿಣೆಗಾಗಿ ದೌರ್ಜನ್ಯ ನೀಡಿ, ತನ್ನ 20 ಪವನ್ ಚಿನ್ನಾಭರಣ ಮಾರಿ ಹಣ ಕಬಳಿಸಿ, ಅನಂತರ ವಾಟ್ಸಪ್ ವಿಚ್ಚೇದನ ನೀಡಲಾಗಿದಗ ಎಂದು ಮಹಿಳೆ ತಿಳೀಸಿದಾರೆ.




