ಕಾಸರಗೋಡಿಗೂ ಕಾಲಿಟ್ಟಿತು ಮಂಕಿಫಾಕ್ಸ್ \ ಜನರಲ್ ಆಸ್ಪತ್ರೆಯಲ್ಲಿ ನಿರೀಕ್ಷಣೆಯಲ್ಲಿದ್ದ ವ್ಯಕ್ತಿಗೆ ಮಂಕೀಫಾಕ್ಸ್ ದೃಢೀಕರಣ

by Narayan Chambaltimar

ಕಾಸರಗೋಡು : ದುಬಾಯಿಯಿಂದ ಊರಿಗೆ ಬಂದು ಆರೋಗ್ಯ ಇಲಾಖೆಯ ಪ್ರತ್ಯೇಕ ನಿರೀಕ್ಷಣೆಯಲ್ಲಿದ್ದ ವ್ಯಕ್ತಿಗೆ ಮಂಕಿಫಾಕ್ಸ್ ದೃಢೀಕರಿಸಕಲಾಗಿದೆ. ಇದರೊಂದಿಗೆ ಕಾಸರಗೋಡಿನಲ್ಲೂ ಮಂಕೀಫಾಕ್ಸ್ ಔದ್ಯೋಗಿಕವಾಗಿ ದೃಢವಾಯಿತು.

34ರ ಹರೆಯದ ಕಾಸರಗೋಡು ನಗರ ಪರಿಸರ ನಿವಾಸಿಗೆ ಮಂಕಿಫಾಕ್ಸ್ ದೃಢೀಕರಿಸಿದ ಬಳಿಕ ಅವರನ್ನು ಜನರಲ್ ಆಸ್ಪತ್ರೆಯ ಪ್ರತ್ಯೇಕ ಐಸೊಲೇಷನ್ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಕಿಫಾಕ್ಸ್ ಶಂಕೆಯೊಂದಿಗೆ ಇವರು ದುಬಾಯಿಯಿಂದ ಊರಿಗೆ ಮರಳಿದ್ದರು. ಬಳಿಕ ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದಿದ್ದರು. ಅನಂತರ ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿರೀಕ್ಷಣೆಯಲ್ಲಿರಿಸಿ ತಪಾಸಿಸಿದಾಗ ಮಂಕೀಫಾಕ್ಸ್ (Mpox)ದೃಢೀಕರಿಸಲಾಯಿತು. ಆದರೆ ಇವರಿಗೆ ತಗುಲಿರುವುದು ಯಾವ ವರ್ಗದ ವೈರಸ್ ಎಂಬುದು ತಿಳಿದುಬಂದಿಲ್ಲ. ಈ ಕುರಿತಾದ ವರದಿ ಪುಣೆ ವೈರಾಲಜಿ ಇನ್ಸ್ಟಿಟ್ಯೂಟಿನಿಂದ ದೊರೆಯಬೇಕಾಗಿದೆ.

ಮಂಕಿಫಾಕ್ಸ್ ಎಂಬುದು ಮಾರಕ ವೈರಲ್ ಸೋಂಕು ರೋಗವಾದುದರಿಂದ ರೋಗಿಯನ್ನು ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿದೆ. ಈ ರೋಗವು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಿಮಾನದಲ್ಲಿ ಪಯಣಿಸುವವರ ನಡುವೆ ಹರಡುವ ಮೂಲಕ ಪಸರಿಸುವುದಾಗಿ ಹೇಳಲಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00