72
- ಗಡಿನಾಡು ಕಾಸರಗೋಡಿನ ಬೇಳ ಗ್ರಾಮದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದ ಪುನರ್ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಂಭ್ರಮೋಲ್ಲಾಸದ ಪಭಕ್ತಿ ಸಡಗರದ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆಯೊಂದಿಗೆ ನಾಂದಿಯಾಗಿದೆ. ಕಾರ್ಮಾರು ವಿಷ್ಣು ಸನ್ನಿಧಿಗೆ ಬದಿಯಡ್ಕದ ಕೆಡೆಂಜಿ ಶ್ರೀಮಹಾವಿಷ್ಣು ಸನ್ನಿಧಿಯಿಂದ ಹಸಿರುವಾಣಿ ಹೊರೆಕಾಣಿಕೆಯ ಶೋಭಾಯಾತ್ರೆಯೊಂದಿಗೆ ಮೂರು ದಶಕದ ಬಳಿಕ ನಡೆಯುವ ಬ್ರಹ್ಮಕಲಶೋತ್ಸವ ಆಚರಣೆಗೆ ಚಾಲನೆ ದೊರಕಿತು
- ಮಾ.1 ಶನಿವಾರ ಬೆಳಿಗ್ಗೆ ಕೆಡೆಂಜಿ ದೇವಳದಿಂದ ಹೊರಟು ಬದಿಯಡ್ಕ -ನೀರ್ಚಾಲು ದಾರಿಯಾಗಿ ಮಾನ್ಯ ಕಾರ್ಮಾರು ಕ್ಷೇತ್ರಕ್ಕೆ ಹಸಿರುವಾಣಿ ತಲುಪಿತು. ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು, ಮಾತೆಯರು ನೇತೃತ್ವ ನೀಡಿದರು.
ಸಂಜೆ 4ಕ್ಕೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಆಗಮನದೋಂದಿಗೆ ದೇವತಾ ಪ್ರಾರ್ಥನೆ ನಡೆದು ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಬಳಿಕ ಶ್ರೀಮದೆಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀಪಾದರು ಮತ್ತು ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಗಳವರ ಆಶೀರ್ವಚನದ ಧಾರ್ಮಿಕ ಸಭೆಯೊಃದಿಗೆ ಸಾಂಸ್ಕೃತಿಕ ಕಾರ್ಯಕ್ಮಗಳು ಉದ್ಘಾಟನೆಗೊಳ್ಳಲಿವೆ.
ದೈನಂದಿನ ಧಾರ್ಮಿಕ ಸಭೆ, ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ 9ದಿನಗಳ ಪರ್ಯಂತ ಜರಗುವ ಬ್ರಹ್ಮಕಲಶ ಸಂಭ್ರಮದಲ್ಲಿ 9ಮಂದಿ ಯತಿಗಳು ಪಾಲ್ಗೊಳ್ಳುವರು.