ವಿದೇಶದಲ್ಲಿ ಉದ್ಯೋಗ ಭರವಸೆಯಿತ್ತು ಕೋಟ್ಯಾಂತರ ರೂ ಪಡೆದು ವಂಚಿಸಿದರೆಂಬ ದೂರಿನಂತೆ ಕೇರಳದ ಪೋಲೀಸ್ ಇನ್ಸ್ ಪೆಕ್ಟರ್ ಮತ್ತು ಆತನ ಗೆಳತಿಯನ್ನು ಕೊಡಗಿನ ಅಡಗುತಾಣದಿಂದ ಬಂಧಿಸಲಾಗಿದೆ. ಪ್ರಸ್ತುತ ಸಸ್ಪೆನ್ಷನ್ ನಲ್ಲಿರುವ ಪೋಲೀಸ್ ಇನ್ಸ್ಪೆಕ್ಟರ್ ಚಂಗನಾಶ್ಶೇರಿಯ ಸಿ.ಟಿ. ಸಂಜಯ್ (47) ಮತ್ತು ಗೆಳತಿಯಾದ ಕೋಟಯಂನಲ್ಲಿ ಕನ್ಸಲ್ಟೆನ್ಸಿ ಉದ್ಯಮ ನಡೆಸುತ್ತಿರುವ ಪ್ರೀತಿ ಮ್ಯಾಥ್ಯೂ (50) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ.
ಪಟ್ಟಣಂತಿಟ್ಟ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರತನಾಗಿದ್ದಾಗ ಪ್ರೀತಿ ಮ್ಯಾಥ್ಯು ಪರಿಚಯವಾಗಿ, ಗೆಳೆತನ ಹೊಂದಿದ ಬಳಿಕ ಇವರಿಬ್ಬರೂ ಸೇರಿ ಸಲುಗೆಯಿಂದಿದ್ದರು. ಈ ನಡುವೆ ಪ್ರೀತಿ ಮ್ಯಾಥ್ಯು ತನ್ನ ಸಂಸ್ಥೆಯ ಹೆಸರಲ್ಲಿ ವಿದೇಶದಲ್ಲಿ ಉನ್ನತ ಉದ್ಯೋಗ ಭರವಸೆಯಿತ್ತು ವಂಚಿಸಿ ಅನೇಕರಿಂದ ಹಣ ಲಪಟಾಯಿಸಿದರೆನ್ನಲಾಗಿದೆ. ಈ ಕುರಿತಾದ ದೂರಿನ ಹಿನ್ನೆಲೆಯಲ್ಲಿ ಇವರ ಪತ್ತೆಗೆ ತನಿಖೆ ನಡೆಸಿದಾಗ ಇವರು ಕೊಡಗಿನಲ್ಲಿ ರಹಸ್ಯವಾಗಿ ಜತೆಗಿರುವುದು ಪತ್ತೆಯಾಯಿತು.
ಕೇರಳದಲ್ಲಿ ವಂಚಿಸಿ ಕೊಡಗಿಗೆ ಬಂದು ರೆಸಾರ್ಟೊಃದರಲ್ಲಿ ಇವರು ಜತೆಯಾಗಿದ್ದರು. ಇವರು ಅನೇಕರಿಗೆ ವಂಚಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರೆಂಬ ಮಾಹಿತಿ ಹಿನ್ನೆಲೆಯಲ್ಲಿ ಪ್ರಕರಣವನ್ನು ಕ್ರೈಂ ಬ್ರಾಂಚಿಗೆ ಹಸ್ತಾಂತರಿಸಲಾಗಿದೆ