ಕೋಟ್ಯಾಂತರ ಸೈಬರ್ ವಂಚನಾ ಪ್ರಕರಣದ ಆರೋಪಿಯನ್ನು ತನಿಖೆಗೆ ಕೊಂಡೊಯ್ಯವ ವೇಳೆ ಪೋಲೀಸಧಿಕಾರಿಯಿಂದಲೇ ಸೆಲ್ಫೀ..\ಕಾನೂನು ಉಲ್ಲಂಘನೆಗೈದ ಮಂಗಳೂರು ಉರ್ವ ಠಾಣಾಧಿಕಾರಿ ಅಮಾನತು

by Narayan Chambaltimar
  • ಕೋಟ್ಯಾಂತರ ಸೈಬರ್ ವಂಚನಾ ಪ್ರಕರಣದ ಆರೋಪಿಯನ್ನು ತನಿಖೆಗೆ ಕೊಂಡೊಯ್ಯವ ವೇಳೆ ಪೋಲೀಸಧಿಕಾರಿಯಿಂದಲೇ ಸೆಲ್ಫೀ..
  • ಕಾನೂನು ಉಲ್ಲಂಘನೆಗೈದ ಮಂಗಳೂರು ಉರ್ವ ಠಾಣಾಧಿಕಾರಿ ಅಮಾನತು

 

  • ಕಣಿಪುರ ಸುದ್ದಿಜಾಲ, ಮಂಗಳೂರು (ಫೆ.25) :

ಬಹುಕೋಟಿ ವಂಚನಾ ಹಗರಣದ ಸೈಬರ್ ವಂಚನಾ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಜತೆ ಸೆಲ್ಫೀ ಫೋಟೋ ತೆಗೆಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಟೀಕೆ, ನಿಂದನೆಗಳಿಗೆ ಗುರಿಯಾದ ಮಂಗಳೂರಿನ ಉರ್ವ ಪೋಲೀಸ್ ಠಾಣೆಯ ಪೋಲೀಸ್ ಹೆಡ್ ಕಾನ್ಸ್ಟೇಬಲ್ ಪೀಟರ್ ಡಿ ಸೋಜ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆರೋಪಿಗಳ ಜತೆ ಕಾನ್ಸ್ಟೇಬಲ್ ಸೆಲ್ಫೀ ತೆಗೆದ ಫಟ ವೈರಲ್ ಆಗಿದ್ದು, ವಿವಾದವಾದ ಹಿನ್ನೆಲೆಯಲ್ಲಿ ಮಂಗಳೂರು ನಗರ ಫೋಲೀಸ್ ಕಮೀಷನರ್ ಅನುಪಮ್ ಅಗ್ರ್ವಾಲ್ ಅವರು ತನಿಖೆ ನಡೆಸಿ ಅಮಾನತು ಆದೇಶ ಹೊರಡಿಸಿದರು.

ಪ್ರಕರಣದ ತನಿಖೆಗೆ ಹೋಗಿದ್ದ ವೇಳೆ ಆರೋಪಿ ರಾಜಕುಮಾರ್ ಜತೆ ಪೋಲೀಸ್ ಅಧಿಕಾರಿ ಪೀಟರ್ ಡಿಸೋಜ ಸೆಲ್ಫೀ ತೆಗೆಸಿಕೊಂಡಿದ್ದರು.
ಇದು ಪೋಲೀಸ್ ಇಲಾಖೆಯ ಶಿಸ್ತಿನ ಉಲ್ಲಂಘನೆಯಾಗಿದ್ದು, ಇದನ್ನು ಸಾಮಾಜಿಕ ಜಾಲ ತಾಣ ಸಹಿತ ಮಾಧ್ಯಮಗಳು ವರದಿ ಮಾಡಿದ್ದುವು.
ಇ- ವಾಣಿಜ್ಯ ಸಂಸ್ಥೆ ಅಮೆಝಾನ್ ಗೆ ವಂಚಿಸಿದ ಹಿನ್ನೆಲೆಯಲ್ಲಿ ಆರೋಪಿಗಳಾದ ರಾಜಸ್ಥಾನದ ರಾಜ್ ಕುಮಾರ್ ಮೀನಾ(23),ಸುಭಾಷ್ ಗುರ್ಜರ್( 27), ಎಂಬಿವರನ್ನು ತಮಿಳುನಾಡಿನ ಸೇಲಂನಿಂದ ಬಂಧಿಸಲಾಗಿತ್ತು. ನಕಲಿ ಗುರುತು ಚೀಟಿ ತೋರಿಸಿ ಅಮೆಝಾನ್ ನಿಂದ 11 45 ಲಕ್ಷ ರೂ ಮೌಲ್ಯದ ಸಾಮಗ್ರಿ ತರಿಸಿಕೊಂಡು, ತದನಂತರ ಅದನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚಿಸಿದ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳನ್ನು ವಾರಂಟ್ ಮೇರೆಗೆ2024 ನವಂಬರಿನಲ್ಲಿ ಬಂಧಿಸಲಾಗಿತ್ತು. ಬಳಿಕ ತನಿಖೆಯ ಸಲುವಾಗಿ ಆರೋಪಿಗಳನ್ನು ವಿಮಾನದಲ್ಲಿ ಜೈಪುರಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿಗಳ ಜತೆ ಜೈಪುರದ ಪ್ರೇಕ್ಷಣೀಯ ಸ್ಥಳವನ್ನು ಸುತ್ತಾಡಿ ಸೆಲ್ಫೀ ತೆಗೆಯಲಾಗಿತ್ತು.ಈ ಕುರಿತಾದ ಚಿತ್ರವೊಂದು ವಿವಾದ ಹುಟ್ಟಿಸಿದ ಹಿನ್ನೆಲೆಯಲ್ಲಿ ಈ ಕಾನೂನು ಪ್ರಕ್ರಿಯೆ ನಡೆದಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00