- ಎರಡೇ ತಾಸಲ್ಲಿ ಆರು ಮಂದಿಗೆ ಇರಿತ, ಐವರ ಸಾವು..!
- 23ರ ಹುಡುಗನ ಪ್ರೇಮ, ಪ್ರಣಯದಿಂದ ಎರಡೂ ಕುಟುಂಬ ಬಲಿಪಶು!
- ಕೇರಳದಲ್ಲೊಂದು ಬೆಚ್ಚಿಬೀಳಿಸಿದ ಪ್ರೀತಿಗಾಥೆ!
ಕಣಿಪುರ ಸುದ್ದಿಜಾಲ
ತಿರುವನಂತಪುರ:
ಇನ್ನೂ ಇಪ್ಪತ್ತೈದರ ಹರೆಯ ದಾಟದ ಒಬ್ಬಾತನೇ ಎರಡು ಮನೆಗಳಲ್ಲಿ ಆರು ಮಂದಿಗಳನ್ನು ಆಕ್ರಮಿಸಿ, ಕಡಿದು ಕೊಲೆಗೈದ ಭೀಭತ್ಸ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ. ಸೋಮವಾರ ಸಂಜೆ ಘಟನೆ ನಡೆದಿದ್ದು, ಬಳಿಕ ಕೊಲೆಗೈದಾತನೇ (ಅಫಾನ್23) ಪೋಲೀಸ್ ಠಾಣೆಗೆ ತೆರಳಿ ಮಾಹಿತಿ ತಿಳಿಸಿದ ವಿಚಿತ್ರ ಕ್ರಿಮಿನಲ್ ಪ್ರಕರಣ ಇದಾಗಿದೆ.
ಕೊಲೆಗೈದ ಆರೋಪಿ ಕೊಲೆ ಪ್ರಕರಣ ನಡೆಸಿ , ಬಳಿಕ ಪೋಲೀಸ್ ಠಾಣೆಗೆ ಹಾಜರಾಗಿ ತಪ್ಪೊಪ್ಪಿಗೆ ನಡೆಸಿದ ಬಳಿಕವಷ್ಟೇ ಭೀಭತ್ಸಕಾರಿಯಾದ ಈ ಸುದ್ದಿ ಹೊರಪ್ರಪಂಚವರಿತಿದೆ.
ಈತನ ಆಕ್ರಮಣದಿಂದ 9ನೇ ತರಗತಿ ವಿದ್ಯಾರ್ಥಿ ಅಫ್ಸಾನ್, ಸಂಬಂಧಿಕರಾದ ಅಫ್ಸಲ್, ಲತೀಫ್, ಯುವತಿ ಷಾಹಿದಾ ಸೇರಿದಂತೆ ಐವರು ಪ್ರಾಥಮಿಕ ಹಂತದಲ್ಲೇ ಮೃತಪಟ್ಟಿದ್ದು, ಓರ್ವ ವ್ಯಕ್ತಿ ತಡರಾತ್ರಿಯ ಈ ವರೆಗಿನ ಹೊತ್ತು ಜೀವನ್ಮರಣ ಪರಿಸ್ಥಿತಿಯಲ್ಲಿರುವುದಾಗಿ ತಿಳಿದುಬಂದಿದೆ.ಅದು ಈತನ ತಾಯಿ ಎಂಬುದೇ ವೈಚಿತ್ರ್ಯ!!
ಆರೋಪಿ ಆರಂಭದಲ್ಲೇ ತನ್ನ ತಾಯಿ ಮತ್ತು ಪ್ರೇಯಸಿ ಗೆಳತಿಯನ್ನು ಇರಿದು ಬಳಿಕ ಅವರ ಸಂಬಂಧಿಕರನ್ನು ಕೊಲೆಗೈದನು.
ಗೆಳತಿಯನ್ನೂ, ಆಕೆಯ ತಾಯ್ತಂದೆಯರನ್ನೂ ಅವರ ಮನೆಗೆ ತಲುಪಿ ಕೊಲೆಗೈದು ಬಳಿಕ ತನ್ನ ಮನೆಯಲ್ಲಿ ತಾಯಿಯ ಕೊಲೆಗೆತ್ನಿಸಿದನು. ಕುಟುಂಬ ಸಂಬಂಧಿಯಾದ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿ ಕೊಲೆ ಪ್ರಕರಣ ನಡೇದಿದೆ. 23ರ ಹರೆಯದ ಹುಡುಗನ ಪ್ರೇಮ,ಕಾಮಗಳ ಅನೈತಿಕ ಸಂಬಂಧ ಎರಡೂ ಕುಟುಂಬಗಳ ಮೇಲಣ ಆಕ್ರಮಣ, ಕೊಲೆಗೆ ಕಾರಣ ಎನ್ನಲಾಗಿದೆ.
ತನ್ನ ಪ್ರೇಯಸಿ ಜತೆಗಿನ ಸಂಬಂಧ ಹಾಗೂ ಕುಟುಂಬದ ಹಸ್ತಕ್ಷೇಪ ಕಾರಣದಿಂದಲೇ ಕೊಲೆ ನಡೆಸಿರುವುದಾಗಿ ಶರಣಾಗತ ಆರೋಪಿ ಖುದ್ದು ಪೋಲೀಸರಿಗೆ ಹೇಳಿಕೆ ಇತ್ತಿದ್ದಾನೆ