- ಮೂಡಂಬೈಲು ಶಾಲೆಯಲ್ಲಿ ಕರ್ನಾಟಕ ಗಡಿ ಪ್ರಾಧಿಕಾರ ನಿರ್ಮಿಸಿದ ಸ್ಮಾರ್ಟ್ ಬೋರ್ಡ್ ಪ್ಯಾನೆಲ್ ಉದ್ಘಾಟನೆ
- ಗಡಿನಾಡಿನ ಕನ್ನಡ ಭಾಷಾ ಅಭಿವೃದ್ಧಿಗೆ ಪ್ರಾಧಿಕಾರದ ನೆರವಿನ ಭರವಸೆ
ಮಂಜೇಶ್ವರ : ಗಡಿನಾಡಿನಲ್ಲಿ ಕನ್ನಡ ಶಾಲೆ,ಕನ್ನಡ ಭಾಷೆ ಉಳಿಯಬೇಕೆಂಬ ಉದ್ದೇಶದಿಂದ ಕನ್ನಡ ಶಾಲೆಗಳಿಗೆ ಕರ್ನಾಟಕ ಗಡಿ ಪ್ರಾಧಿಕಾರದ ವತಿಯಿಂದ ಎಲ್ಲಾ ರೀತಿಯ ಸಹಕಾರ, ಸೌಲಭ್ಯ ನೀಡಲಾಗುವುದೆಂದು ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.
ಮಂಜೇಶ್ವರದ ಮೂಡಂಬೈಲು ಪ್ರೌಢ ಶಾಲೆಯಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರದ ಅನುದಾನದಲ್ಲಿ ಸ್ಥಾಪಿತವಾದ ಸ್ಮಾರ್ಟ್ ಬೋರ್ಡ್ ಪ್ಯಾನೆಲ್ ನ ಉದ್ಘಾಟನೆ ನೆರವೇರಿಸಿದ ಕರ್ನಾಟಕ ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡುತ್ತಾ ಮೂಡಂಬೈಲು ಶಾಲೆಯ ಅಭಿವೃದ್ಧಿಗೆ ಗಡಿ ಪ್ರಾಧಿಕಾರದ ಸಂಪೂರ್ಣ ಸಹಕಾರ ಇದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಾಧಿಕಾರದ ಸದಸ್ಯರಾ ಎ.
ಆರ್ ಸುಬ್ಬಯ್ಯಕಟ್ಟೆ, ಪ್ರಾಧಿಕಾರದ ಅಧ್ಯಕ್ಷರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅರಿಬೈಲು ಗೋಪಾಲ ಶೆಟ್ಟಿ, ,ಪ್ರೊಫೆಸರ್ ಎ ಶ್ರೀನಾಥ್ , ಎನ್ ಚನಿಯಪ್ಪ ನಾಯ್ಕ್,
ಟಿ. ಶಂಕರನಾರಾಯಣ ಭಟ್, ,ಮೂಡಂಬೈಲು ಶಾಲೆಯ ಶತಮಾನೋತ್ಸವದ ಅಧ್ಯಕ್ಷರಾದ ನ್ಯಾಯವಾದಿ ಎಂ.ದಾಮೋದರ ಶೆಟ್ಟಿ ಮಜಿಬೈಲ್,ಮೂಡಂಬೈಲು ಶಾಲೆ ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು,ಹಳೆ ವಿಧ್ಯಾರ್ಥಿ ಸಂಘದ ಕೋಶಾಧಿಕಾರಿ ಬಶೀರ್ ಮೂಡಂಬೈಲ್ ,ಪಿ.ಟಿ.ಎ ಅಧ್ಯಕ್ಷರಾದ ಅಬ್ದುಲ್ ಪಜಿಂಗಾರ್,ಎಂ.ಪಿ.ಟಿ.ಎ ಅಧ್ಯಕ್ಷೆ ಸುಮಿತ, ದಯಾವತಿ ಟೀಚರ್ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡುವ ಮೂಲಕ ಆರಂಭಗೊಂಡ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಜಾರ್ಜ್ ಕ್ರಾಸ್ತ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾ ಡಿದರು.ದೀಕ್ಷಾ ಟೀಚರ್ ಕಾರ್ಯಕ್ರಮ ನಿರೂಪಿಸಿ ,ಮೋಹಿನಿ ಟೀಚರ್ ವಂದಿಸಿದರು.