- ಕೇರಳದಲ್ಲಿ ಬಿಜೆಪಿ ನಿರ್ಣಾಯಕ ರಾಜಕೀಯ ಶಕ್ತಿಯಾಗಿ ಬೆಳೆದಿರುವುದನ್ನು ಎದುರಾಳಿ ಪಕ್ಷಗಳೂ ಒಪ್ಪಿವೆ
- ಕಾರ್ಯಕರ್ತರ ವಲಯ ಸಮ್ಮೇಳನ ಉದ್ಘಾಟಿಸಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ
ಕಾಸರಗೋಡು: ಕೇರಳದಲ್ಲಿ ಬಿ.ಜೆ.ಪಿ. ರಾಜಕೀಯ ನಿರ್ಣಾಯಕ ಶಕ್ತಿಯಾಗಿ ಬೆಳೆದಿದೆಯೆಂದೂ, ಪಕ್ಷದ ಭವಿಷ್ಯ ಶೋಭಾಯಮಾನವಾಗಿದೆಯೆಂದೂ , ಬಿಜೆಪಿ ಬೆಳವಣಿಯನ್ನು ಇದಿರಾಳಿ ಪಕ್ಷಗಳೂ ಕೂಡಾ ಒಪ್ಪಿಕೊಂಡಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಭಾನುವಿರ ನಡೆದ
ಬಿಜೆಪಿ ನೀಲೇಶ್ವರ ಮಂಡಲದ ಪುಂಞಂಞ್ಞಾಲ್ ವಲಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕಮ್ಯೂನಿಸ್ಟ್ ಕೋಟೆಗಳಲ್ಲಿ ಮಾಡಿದ ಮುನ್ನಡೆ ಮುಂಬರುವ ಸ್ಥಳೀಯಾಡಳಿತ ಚುನಾವಣೇಯಲ್ಲೂ ಪ್ರತಿಫಲಿಸಲಿವೆ. ಮೂರನೇ ನರೇಂದ್ರಮೋದಿ ಸರಕಾರದ ಯೋಜನೆ, ಪ್ರಯೋಜನಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕ ದುಡಿಯಬೇಕೆಂದೂ ಅವರು ಕರೆ ಇತ್ತರು.
ಕಾಸರಗೋಡು ಜಿಲ್ಲೆಯಲ್ಲಿ ಪಕ್ಷದ ಭವಿಷ್ಯ ಉತ್ಸಾಹಿ ಯುವ ಕಾರ್ಯಕರ್ತರ ಕೈಯ್ಯಲಿದೆ. ಕೇರಳದಲ್ಲಿ ಎಲ್ಲೆಡೆ ಪಕ್ಷ ಕಾಣುತ್ತಿರುವ ಜನ ಬೆಂಬಲದ ಮುನ್ನಡೆ ಕಾಸರಗೋಡಿನಲ್ಲೂ ಇದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷೆಯೇ ಇಲ್ಲದ ಕಡೆ ಮತ ಹೆಚ್ಚಳವಾಗಿದೆ. ಹೊಸ ಕಾರ್ಯಕರ್ತರೂ ಪಕ್ಷಕ್ಕೆ ಬಃದಿದ್ದಾರೆ. ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲನವಾಗಲಿದೆ. ಕಮ್ಯೂನಿಸ್ಟ್ ಕೋಟೆಗಳಲ್ಲಿ ಬಿರುಕುಮೂಡಲಿದೆ. ಅದಕ್ಕಾಗಿ ಕಾರ್ಯಕರ್ತರು ಸಂಘಟಿತವಾಗಿ, ಜನೋಪಯೋಗಿ ರಾಜಕಾರಣ ನಡೆಸಬೇಕು, ಜನಪ್ರೀತಿ ಪಡೆಯಬೇಕು-ಎಂ.ಎಲ್. ಅಶ್ವಿನಿ
ಬಿಜೆಪಿ ಜಿಲ್ಲಾಧ್ಯಕ್ಷೆ
ಸಮಾರಂಭದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ನ 119ನೇ ಸಂಚಿಕೆ ಯನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಿ, ಆಲಿಸಲಾಯಿತು. ಕೇಂದ್ರ ಸರಕಾರ ಅನುಷ್ಠಾನಗೊಳಿಸಿದ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಮುಳಿಯಾರು ಮಂಡಲ ಮಾಜಿ ಅಧ್ಯಕ್ಷ ಮಹೇಶ್ ಗೋಪಾಲ್ ಉಪನ್ಯಾಸ ನೀಡಿದರು.
ಬಿಜೆಪಿ ವೆಸ್ಟ್ ಎಳೇರಿ ಪಂಚಾಯತ್ ಘಟಕ ಅಧ್ಯಕ್ಷ ಸುರೇಶ್ ಕಮ್ಮಾಡಂ ಅಧ್ಯಕ್ಷತೆ ವಹಿಸಿದರು. ನೀಲೇಶ್ವರಂ ಮಂಡಲದ ಅಧ್ಯಕ್ಷ ಸಾಗರ್ ಚಾತಯತ್ತ್, ಮಃಡಲ ಅಧ್ಯಕ್ಷ ಸಾಗರ್ ಚಾತಮತ್ತ್, ಕಾರ್ಯದರ್ಶಿಗಳಾದ ಎ.ಕೆ.ಚಂದ್ರನ್, ರಾಜೀವನ್, ಚೀಮೇನಿ ಮಾಜಿ ಮಂಡಲಾಧ್ಯಕ್ಷ ಸಿ.ವಿ.ಸುರೇಶ್, ಮೂಳಿಯಾರ್ ಮಂಡಲ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಮಾನಡ್ಕ, ಜಿಲ್ಲಾ ಸಮಿತಿ ಸದಸ್ಯ ಟಿ.ಸಿ. ರಾಮಚಂದ್ರನ್ ಮೊದಲಾದವರು ಮಾತನಾಡಿದರು.
ಪುಂಙಂಚಾಲ್ ವಲಯಾಧ್ಯಕ್ಷ ಸುರೇಶ್ ಕುಮಾರ್ ಸ್ವಾಗತಿಸಿದರು. ವೆಸ್ಟ್ ಏಳೇರಿ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ವಂದಿಸಿದರು.