- ಸಿಂಗಾರಿ ಬೀಡಿ ಮಾಲಕರ ಮನೆಗೆ ಇ.ಡಿ.ಧಾಳಿ ನಡೆಸಲು ಸಂಚು ರೂಪಿಸಿದ ಪ್ರಧಾನ ಆರೋಪಿಯ ಬಂಧನ
- ಉದ್ಯಮಿ ಮನೆಯಿಂದ ದೋಚಿದ್ದು 35ಲಕ್ಷರೂಗಳಲ್ಲ, ಭರ್ತಿ 5 ಕೋಟಿ ರೂ..?!
ಕಾಸರಗೋಡು: ಇ.ಡಿ. ಅಧಿಕಾರಿಗಳೆಂದು ನಂಬಿಸಿ ವಿಟ್ಲ ಸಮೀಪದ ಬೋಳಂತೂರು ನಿವಾಸಿ ಸಿಂಗಾರಿ ಬೀಡಿ ಮಾಲಕ, ಉದ್ಯಮಿ ಸುಲೈಮಾನ್ ಹಾಜಿ ಮನೆಯಿಂದ ಲಕ್ಷಾಂತರ ರೂ ಅಪಹರಿಸಿ ಕೊಂಡೊಯ್ದ ಪ್ರಕರಣದಲ್ಲಿ ಕೇಸಿನ ಸೂತ್ರಧಾರನೆನ್ನಲಾದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕೇರಳದ ಕಣ್ಣೂರು ವಾರಂ ನಿವಾಸಿ ಅಬ್ದುಲ್ ನಿಸಾರ್ (52) ಬಂಧಿತ ಆರೋಪಿಯಾಗಿದ್ದಾನೆ.
ಪ್ರಕರಣದಲ್ಲಿ ಈಗಾಗಲೇ ಬಂಧಿತನಾದ ಕೊಡುಂಗಲ್ಲೂರು ಪೋಲೀಸ್ ಠಾಣೆಯ ಎ.ಎಸ್.ಐ ಆಗಿದ್ದ ಷಫೀರ್ ಬಾಬುವಿನ ಆಪ್ತ ಗೆಳೆಯ ಈತನಾಗಿದ್ದು, ಇವರಿಬ್ಬರು ಸೇರಿ ಇ.ಡಿ. ಅಧಿಕಾರಿಗಳ ನೆಪದಲ್ಲಿ ಧಾಳಿ ನಡೆಸಲು ಮತ್ತು ಹಣ ಲೂಟಲು ಸಂಚು ಮಾಡಿದರೆಂದು ತನಿಖೆ ನಡೆಸುವ ಪ್ರತ್ಯೇಕ ತನಿಖಾದಳ ತಿಳಿಸಿದೆ.
ಈತನ್ಮಧ್ಯೆ ಬೀಡಿ ಮಾಲಕರ ಮನೆಯಿಂದ ಇ.ಡಿ. ಅಧಿಕಾರಿಗಳ ನೆಪದಲ್ಲಿ ಅಪಹರಿಸಿದ ಹಣದ ಮೌಲ್ಯ ಎಫ್.ಐ.ಆರ್.ನಲ್ಲಿ 35ಲಕ್ಷ ರೂ ಎಂದು ದಾಖಲಿಸಿದ್ದರೂ , ನಿಜಕ್ಕೂ 5ಕೋಟಿ ರೂಗಳ ಅಪಹರಣ ನಡೆದಿದೆ ಎಂದು ಕೇರಳ ಪೋಲೀಸ್ ಸಹಾಯಕ ಉಪನಿರೀಕ್ಷಕರು ನಡೆಸಿದ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣದ ಸೂತ್ರಧಾರಿ ಕಣ್ಣೂರಿನ ಅಬ್ದುಲ್ ನಾಸರ್ ನನ್ನು ವಿಚಾರಣೆ ನಡೆಸುವ ಮೂಲಕ ಈ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
- ಆರ್ಥಿಕ ಸಹಾಯ ನಿರಾಕರಣೆಯೇ ದರೋಡೆಗೆ ಕಾರಣ..
ಸಿರಾಜುದ್ದೀನ್ ನಾರ್ಶ ಎಂಬವರು ತನ್ನ ತಾಯಿಗೆ ಅನಾರೋಗ್ಯವಿದ್ದು, ಆರ್ಥಿಕ ಸಹಾಯ ನೀಡುವಂತೆ ಸುಲೈಮಾನ್ ಹಾಜಿ ಅವರಲ್ಲಿ ಕೇಳಿಕೊಂಡಿದ್ದರು. ಆದರೆ ಹಾಜಿ ಇದಕ್ಕೆ ನಿರಾಕರಿಸಿದ್ದರು. ಈ ಕಾರಣದಿಂದ ಇ.ಡಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅವರಿಂದ ಧಾಳಿ ಮಾಡಿಸಿ ಆ ಮೂಲಕ ತನಗೆ ಸಿಗುವ ಬಹುಮಾನದ ಹಣದಲ್ಲಿ ಚಿಕಿತ್ಸೆ ಕೊಡಿಸುವ ಯೋಜನೆ ಸೀರಾಜುದ್ದೀನ್ ಹಾಕಿಕೊಂಡಿದ್ದರು.
ಈತನಿಗೆ ಸಂಪರ್ಕವಾದ ಕೇರಳ ಕಣ್ಣೂರಿನ ಅಬ್ದುಲ್ ನಾಸರ್ ಇ.ಡಿ.ಅಧಿಕಾರಿಯೆಂದು ಎ.ಎಸ್.ಐ ಶಫೀರ್ ಬಾಬುವನ್ನು ಪರಿಚಯಿಸಿ ಇಡೀ ದರೋಡೆಗೆ ಮಾಸ್ಠರ್ ಪ್ಲಾನ್ ರೂಪಿಸಿದರು.
ಇ.ಡಿ.ಅಧಿಕಾರಿಗಳಂತೆ ನಟಿಸಿದ ತಂಡಕ್ಕೆ ಸುಲೈಮಾನ್ ಹಾಜಿ ಮನೆಯಿಂದ 98ಲಕ್ಷ ರೂ ದೊರಕಿದೆಯೆಂದೂ, ಆದರೆ ಪ್ರಕರಣವನ್ನು ಪೋಲೀಸರಿಗೊಪ್ಪಿಸದೇ ಮುಚ್ಚಿ ಹಾಕಬೇಕೆಂದು ಬಯಸಿ ತಸುಲೈಮಾನ್ ಹಾಜಿಯವರೇ ಒಂದು ಚೀಲ ಹಣವನ್ನು ಒಪ್ಪಿಸಿದ್ದಾರೆಂದೂ ಹೇಳಲಾಗುತ್ತಿದೆ.