- ಕಾಸರಗೋಡಿನ ಪೆರಿಯ ಕಲ್ಯೋಟಿನ ಹುತಾತ್ಮರಿಗೆ ಸ್ಮಾರಕ ಮಂದಿರ
- ಕರ್ನಾಟಕ ಕೆಪಿಸಿಸಿಯಿಂದ 25ಲಕ್ಷ ರೂ ಘೋಷಿಸಿದ ಡಿ.ಕೆ.ಶಿವಕುಮಾರ್
ಕೇರಳದ ಕಾಸರಗೋಡು ಜಿಲ್ಲೆಯ ಪೆರಿಯ ಎಂಬಲ್ಲಿ ಕಮ್ಯೂನಿಸ್ಟರ ಕಗ್ಗೊಲೆಗೆ ಬಲಿಯಾದ ಹುತಾತ್ಮ ಶರತ್ ಲಾಲ್ – ಕೃಪೇಶ್ ಅವರ ಸ್ಮಾರಕ ನಿರ್ಮಾಣಕ್ಕೆ ಕರ್ನಾಟಕ ಕೆ.ಪಿ.ಸಿ.ಸಿ ವತಿಯಿಂದ 25ಲಕ್ಷ ರೂ ನೀಡುವುದಾಗಿ ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದರು.
ಕಾಸರಗೋಡಿನ ಪೆರಿಯ ಕಲ್ಯೋಟಿನಲ್ಲಿ ನಡೆದ ಯುವ ಕಾಂಗ್ರೆಸ್ಸಿಗರಿಬ್ಬರ ಅವಳಿ ಕೊಲೆ
ಇಡೀ ದೇಶದ ಕಾಂಗ್ರೆಸ್ಸಿಗರ ಭಾವನೆ ಕೆರಳಿಸಿದೆಯೆಂದೂ, ಈ ಬಲಿದಾನದ ಮೂಲಕ ಪಕ್ಷದೊಳಗೆ ಐಕ್ಯತೆ,ಏಕತೆ ಮೂಡಿದೆಯೆಂದೂ ಡಿ.ಕೆ.ಶಿವಕುಮಾರ್ ಹೇಳಿದರು.
ಬಲಿದಾನಿಗಳಾದ ಕೃಪೇಶ್ -ಶರತ್ ಲಾಲ್ ಅವರ ವಿಯೋಗದ ಆರನೇ ಹುತಾತ್ಮ ದಿನಾಚರಣೆ ಉದ್ಘಾಟಿಸಿ ಡಿ ಕೆ.ಶಿ ಮಾತನಾಡಿದರು.
ಕೇರಳದ ಕಮ್ಯೂನಿಸ್ಟ್ ಸರಕಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪತನ ಕಾಣಲಿದೆ ಎಂದ ಅವರು ಬದಲಿಗೆ ಜನತೆಗೆ ನೆಮ್ಮದಿ ನೀಡುವ ಕಾಂಗ್ರೆಸ್ ಸರಕಾರ ಬರುವುದು ನಿಶ್ಚಿತ ಎಂದರು.
ಕೆ.ಪಿ.ಸಿಸಿ ಅಧ್ಯಕ್ಷ ಕೆ.ಸುಧಾಕರನ್, ಸಂಸದ ರಾಜಮೋಹನ್ ಉಣ್ಣಿತಾನ್, ನಾಯಕರಾದ ಪಿ.ಕೆ.ಫೈಝಲ್, ಷಾಪಿ ಪರಂಬಿಲ್, ಕೆಪೀಸಿಸಿ, ಡಿಸಿಸಿ ಪದಾಧಿಕಾರಿಗಳು ಪಾಲ್ಗೊಂಡರು. ನೂರಾರು ಕಾರ್ಯಕರ್ತರು ಪಾಲ್ಗೊಂಡ ಸಂಸ್ಮರಣೆ ಹುತಾತ್ಮರಿಬ್ಬರ ಮೇಲಿನ ಜನಪ್ರೀತಿಯ ಗೌರವಕ್ಕೆ ಸಂಕೇತವಾಯಿತು.