- ಕಲಾವಿದರ ಕಾಮಧೇನು, ಯಕ್ಷ ಕಲಾ ಪೋಷಕ ಟಿ.ಶಾಮಭಟ್ ರಿಗೆ ಯಕ್ಷಭಾರತಿಯ ದಶಮಾನೋತ್ಸವ ಗೌರವ ಸನ್ಮಾನ
ಸಂಪಾಜೆ ಯಕ್ಷೋತ್ಸವ ಸಹಿತ ಯಕ್ಷಗಾನ ಕಲಾವಿದರು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪರಿಣತರಾದ ವಿದ್ವಾಂಸರಿಗೆ ಗೌರವ, ತಾಳಮದ್ದಳೆ ಸಪ್ತಾಹ, ವಿದ್ಯಾರ್ಥಿಗಳಿಗೆ ಯಕ್ಷಗಾನ ಸ್ಪರ್ಧೆ, ಕಲಾವಿದರಿಗೆ ನೆರವು, ಯಕ್ಷಗಾನ ಮೇಳದ ಮೂಲಕ ಪೌರಾಣಿಕ ಯಕ್ಷಗಾನ ಪೋಷಣೆ, ಪ್ರದರ್ಶನ ನೀಡುವಲ್ಲಿ ಮಾರ್ಗದರ್ಶಕರಾದ ಕಲಾಪೋಷಕ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಟಿ. ಶ್ಯಾಮ್ ಭಟ್ ಇವರಿಗೆ ಯಕ್ಷ ಭಾರತಿ ರಿ. ಬೆಳ್ತಂಗಡಿ ಸಂಸ್ಥೆಯು ದಶಮಾನೋತ್ಸವದ ಗೌರವ ಸನ್ಮಾನವನ್ನು ಸಂಪಾಜೆಯ ಅವರ ನಿವಾಸದಲ್ಲಿ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿದ ಶ್ಯಾಮ್ ಭಟ್ ಅವರು ಯಕ್ಷ ಭಾರತಿ ನಡೆಸುತ್ತಿರುವ ಯಕ್ಷಗಾನ ಚಟುವಟಿಕೆಗಳು, ಆರೋಗ್ಯ ಸೇವೆ, ಸಂಸ್ಕಾರ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ ಉಜಿರೆ,ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಟ್ರಸ್ಟಿ ಹರೀಶ್ ರಾವ್ ಮುಂಡ್ರುಪ್ಪಾಡಿ , ಸಂಚಾಲಕ ಮಹೇಶ್ ಕನ್ಯಾಡಿ, ದಶಮಾನೋತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳೆಂಜ ಮತ್ತು ಮುರಳಿ ಕೃಷ್ಣ ಆಚಾರ್ ಉಪಸ್ಥಿತರಿದ್ದರು.