212
- ಕಣಜದ ಹುಳ ಆಕ್ರಮಣ : ಗಾಯಗೊಂಡಿದ್ದ ವೃದ್ಧನ ಸಾವು
ಕಣಜದ ಹುಳ ಕಡಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ವೃದ್ಧರೊಬ್ಬರು ಮೃತಪಟ್ಟರು. ನಡೆದು ಹೋಗುತ್ತಿದ್ದಾಗ ಗುಂಪಾಗಿ ಬಂದ ಕಣಜದ ಹುಳದ ಆಕ್ರಮಣಕ್ಕೆ ತುತ್ತಾದ, ಹೋಟೆಲ್ ಕಾರ್ಮಿಕ ಪೈವಳಿಕೆ ಪಂಚಾಯತಿನ ಬಾಯಾರು ಪೆರ್ವೋಡಿ ನಿವಾಸಿ ಸುರೇಶ್ ಯು.ಭಟ್(79) ಎಂಬವರು ಮೃತಪಟ್ಟವರೆಂದು ಹೇಳಲಾಗಿದೆ.
ಕಳೆದ ಗುರುವಾರ ಸಂಜೆ ಮನೆಗೆ ನಡೆದು ಹೋಗುತ್ತಿದ್ದಾಗ ಇವರು ಕಣಜದ ಹುಳುಗಳ ಧಾಳಿಗೆ ತುತ್ತಾಗಿದ್ದರು. ದಾರಿಯಲ್ಲಿದ್ದ ಇತರರ ಮೇಲೂ ಕಣಜದ ಹುಳು ಆಕ್ರಮಣ ಉಂಟಾದರೂ ಅವರು ಓಡಿ ಪಾರಾಗಿದ್ದರು. ಆದರೆ ವೃದ್ಧರಾದ ಭಟ್ಟರು ಅಲ್ಲಿಯೇ ಕುಸಿದು ಬಿದ್ದಿದ್ದರು. ಬಳಿಕ ಮನೆಯವರು ಮತ್ತು ಊರವರು ಸೇರಿ ದೇರ್ಳಕಟ್ಟೆ ಆಸ್ಪತ್ರೆಗೆ ಸೇರಿಸಿದ್ದರೂ, ಚಿಕಿತ್ಸೆಗೆ ಸ್ಪಂದಿಸದೇ ಇಂದುಮುಂಜಾನೆ ಸ್ವಗೃಹದಲ್ಲಿ ಕೊನೆಯುಸಿರೆಳೆದರು.
ಮೃತರು ಪತ್ನಿ ಸುಮತಿ ಮಕ್ಕಳಾದ ಹರೀಶ್ ಭಟ್, ಗಣೇಶ ಭಟ್, ದಿ.ನಾಗೇಶ್ ಭಟ್, ಶೋಭಾ, ಸುಷ್ಮಾ ಸಹಿತ ಅಪಾರಬಂಧು ವರ್ಗವನ್ನು ಅಗಲಿದ್ದಾರೆ.