- ಪೆರ್ಲದಲ್ಲಿ ರೋಟರಿ ಕಮ್ಯೂನಿಟಿ ದಳ ಅಸ್ತಿತ್ವಕ್ಕೆ : ನೂತನ ಅಧ್ಯಕ್ಷರಾಗಿ ಡಾ.ಬಿ.ಶಿವ ನಾಯ್ಕ್ ಪದಗ್ರಹಣ
- ರೋಟರಿ ಸಮಾಜದ ಎಲ್ಲ ವರ್ಗದ ಪ್ರಾತಿನಿಧಿಕ ಸಂಸ್ಥೆ: ಡಾ.ಬಿ.ನಾರಾಯಣ ನಾಯ್ಕ್
ಕಾಸರಗೋಡು ರೋಟರಿ ಸೇವಾ ಚಟುವಟಿಕೆಗಳನ್ನು ಗ್ರಾಮೀಣ ಮಟ್ಟಕ್ಕೂ ತಲುಪಿಸುವ ಧ್ಯೇಯದೊಂದಿಗೆ
ರೋಟರಿ ಕಮ್ಯೂನಿಟಿ ದಳ (ಆರ್ ಸಿಸಿ,ಎಂಬಿಎಚ್ ಪೆರ್ಲ)
ಪೆರ್ಲದಲ್ಲಿ ಅಸ್ತಿತ್ವಕ್ಕೆ ಬಂದಿದೆ.
ರೋಟರಿ ಕ್ಲಬ್ ಕಾಸರಗೋಡು ಇದರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಶ್ರೀ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್, ಶಾರದಾ ಮರಾಟಿ ಮಹಿಳಾ ವೇದಿಕೆ, ಮರಾಟಿ ಸಮಾಜ ಸೇವಾ ಸಂಘ ಎಂಬಿವುಗಳ ಸಂಯುಕ್ತ ನೇತೃತ್ವದಲ್ಲಿ ಪೆರ್ಲದ ಮರಾಟಿ ಸಮಾಜ ಸಭಾ ಭವನದಲ್ಲಿ ನೂತನ ಘಟಕವನ್ನು ಉದ್ಘಾಟಿಸಲಾಯಿತು.
ಸಾರ್ಜೆಂಟ್ ಅಟ್ ಆರ್ಮ್ಸ್ , ನ್ಯಾಯವಾದಿ ಕೆ.ಎನ್.ಶೆಟ್ಟಿ ಅವರು ರೋಟರಿಯ ಪ್ರಮುಖ ದಾನಿ ಡಾ.ಬಿ.ನಾರಾಯಣ ನಾಯ್ಕ್ ಅವರಿಗೆ ಅಧ್ಯಕ್ಷೀಯ ಪದವಿಯ ಕಾಲರ್ ನೀಡುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.
ರೋಟರಿ ಪ್ರಾರ್ಥನೆ, ಪ್ರತಿಜ್ಞೆಯನ್ನು ರೊಟೇರಿಯನ್ ಸಿ ಎ. ವಿಶಾಲ್ ಕುಮಾರ್ ನಡೆಸಿಕೊಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ.ಬಿ.ನಾರಾಯಣ ನಾಯ್ಕ್ ಕಾಸರಗೋಡು ರೋಟರಿಯ ಚಟುವಟಿಕೆ, ವೈಶಿಷ್ಟ್ಯ ವಿವರಿಸಿದರು.ರೋಟರಿ ಪ್ರತಿಷ್ಠಿತರ ಸಂಸ್ಥೆಯಷ್ಟೇ ಅಲ್ಲ, ಅಲ್ಲಿ ಸಾಮಾಜಿಕ ಕಳಕಳಿಯ ಜಾತಿ,ಮತ,ಬೇಧ ರಹಿತ ವಾತಾವರಣದ ಮುಕ್ತ ಚಟುವಟಿಕೆಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಪೆರ್ಲದಂತಹ ಗ್ರಾಮೀಣ ಪರಿಸರಕ್ಕೆ ಇದರ ಉಪಯೋಗ ಸಿಗಲಿ ಎಂದು ಹಾರೈಸಿದರು.
ರೋಟರಿ ಆರ್.ಸಿ.ಸಿ ಜಿಲ್ಲಾ ಅಧ್ಯಕ್ಷ ಇ.ಪಿ.ಶ್ರೀಧರನ್ ಪೆರ್ಲದ ನೂತನ ಆರ್.ಸಿ.ಸಿ./ಎಂಬಿಎಚ್ ಸದಸ್ಯರಿಗೆ ರೋಟರಿ ಪಿನ್ ನೀಡಿ ಸದಸ್ಯರನ್ನಾಗಿ ಅವರೋಹಣ ಮಾಡಿದರು. ಪಶುವೈದ್ಯಕೀಯ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ.ಬಿ.ಶಿವನಾಯ್ಕ್ ಅವರನ್ನು ಎಂಬಿಎಚ್ ಪೆರ್ಲದ ಆರ್.ಸಿ.ಸಿ.ಯ ಸ್ಥಾಪಕ ಅಧ್ಯಕ್ಷರನ್ನಾಗಿ ಸ್ಥಾನಾರೋಹಣ ಮಾಡಲಿಯಿತು.
ಡಾ.ಶಿವ ನಾಯ್ಕ್ ಅವರನ್ನು ಗೋಕುಲ್ ಚಂದ್ರಬಾಬು ಪರಿಚಯಿಸಿದರು. ರೋಟರಿ ವಲಯ ಸಂಯೋಜಕ ಎಂ.ಕೆ.ರಾಧಾಕೃಷ್ಣನ್ ನೂತನ ಅಧ್ಯಕ್ಷರಿಗೆ ರೋಟರಿ ಪದಾಧಿಕಾರಿತ್ವದ ಕಾಲರ್ ಪ್ರದಾನ ಮಾಡಿದರು.
ಈ ಸಂದರ್ಭ ಮಾತನಾಡಿದ ಅವರು ರೋಟರಿ ಚಟುವಟಿಕೆಗಳನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸಿ, ಸೇವಾ ಕೈಂಕರ್ಯ ನಡೆಸುವ ಅವಕಾಶವಿದು. ಎಲ್ಲರ ಸಹಕಾರದಿಂದ ಚಟುವಟಿಕೆ ನಡೆಸುವುದಾಗಿ ಹೇಳಿದರು.
ಶಾರದಾ ಮರಾಠಿ ಸೇವಾಸಂಘದ ಅಧ್ಯಕ್ಷೆ ಪುಷ್ಪ ಅಮೆಕ್ಕಳ, ಡಾ.ಬಿ.ಜಿ ನಾಯ್ಕ್, ಶಾರದಾ ಮಹಿಳಾ ವೇದಿಕೆ ಅಧ್ಯಕ್ಷೆ ವಾರಿಜ ಅಡ್ಯನಡ್ಕ, ಲಕ್ಷ್ಮಿ ಟೀಚರ್ ನಲ್ಕ, ಗೋಪಿ ಕೃಷ್ಣ, ರೋಟೇರಿಯನ್ ಪ್ರಶಾಂತಕುಮಾರ್ ಶುಭ ಹಾರೈಸಿದರು. ಹರಿಪ್ರಸಾದ್ ಸ್ವಾಗತಿಸಿ, ಬಾಲಕೃಷ್ಣ ವಂದಿಸಿದರು.