- ಕೋಟೆಕಾರು ಬೇಂಕ್ ದರೋಡೆ ಮಾದರಿಯಲ್ಲೇ ಕೇರಳದಲ್ಲಿ ಫೆಡರಲ್ ಬ್ಯಾಂಕ್ ದರೋಡೆ
ಶುಕ್ರವಾರ ಮಧ್ಯಾಹ್ನ ಬ್ಯಾಂಕ್ ಗೆ ನುಗ್ಗಿ ಕತ್ತಿ ತೋರಿಸಿ ಬೆದರಿಸಿ 15ಲಕ್ಷ ದರೋಡೆ..
ಕೇರಳದ ತ್ರಿಶೂರು ಜಿಲ್ಲೆಯ ಚಾಲಕ್ಕುಡಿ ಪೇಟ ಎಂಬಲ್ಲಿ ಮುಖವಾಡಧಾರಿಗಳು ಫೆಡರಲ್ ಬ್ಯಾಂಕ್ ಶಾಖೆಗೆ ನುಗ್ಗಿ ಸಿಬಂದಿಗಳನ್ನು ದಿಗ್ಬಂಧಿಸಿ, ಕತ್ತಿ ತೋರಿಸಿ ಬೆದರಿಸಿ ಕ್ಯಾಷ್ ಕೌಂಟರಿನಿಂದ 15ಲಕ್ಷ ರೂ ದರೋಡೆಗೈದ ಘಟನೆ ನಡೆದಿದೆ.
ಶುಕ್ರವಾರ ಮಧ್ಯಾಹ್ನ ಬೇಂಕಿಗೆ ನುಗ್ಗಿದ ಮುಖವಾಡಧಾರಿ ದರೋಡೆಕೋರರು ಬೇಂಕ್ ನೌಕರರನ್ನು ಬೆದರಿಸಿ, ಅವರನ್ನು ವಾಷ್ ರೂಮಿನಲ್ಲಿ ದಿಗ್ಬಃಧಿಸಿ ಕ್ಯಾಷ್ ಕೌಂಟರಿನ ಗಾಜು ಒಡೆದು ದರೋಡೆ ಕೃತ್ಯ ನಡೆಸಿದ್ದಾರೆ.ದರೋಡೆಕೋರರು ಬೈಕಿನಲ್ಲಿ ಬಂದು, ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಚಾಲಕ್ಕುಡಿ ಪೋಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಫೆಡರಲ್ ಬೇಂಕ್ ಶಾಖೆ ಜನನಿಬಿಡ ಪೇಟೆಯಲ್ಲಿದ್ದರೂ ಶುಕ್ರವಾರ ಮಧ್ಯಾಹ್ನ ಈ ಪರಿಸರದ ಮುಸಲ್ಮಾನರು ಮಸೀದಿಗೆ ಹೋದ ಹೊತ್ತಲ್ಲಿ ಘಟನೆ ನಡೆದಿದೆ.ಆರೋಪಿಗಳು ಮುಖವಾಡ ಮತ್ತು ಹೆಲ್ಮೆಟ್ , ಗ್ಲೌಸ್ ಧರಿಸಿದ್ದರೆಂದು ಬೇಂಕ್ ಸಿಬಂದಿಗಳು ಪೋಲೀಸರಿಗೆ ತಿಳಿಸಿದ್ದರು.
ತಲಪಾಡಿ ಕೋಟೆಕಾರು ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ.ರೋಡ್ ಶಾಖೆಯಲ್ಲಿ ನಡೆದ ಅದೇ ರೀತಿಯ ಪ್ರಕರಣ ಇದಾಗಿದ್ದು, ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನೆಲ್ಲಾ ಪಡೆದು ತಪಾಸಣೆ ನಡೆಯುತ್ತಿದೆ.