- ಕೇರಳದಲ್ಲಿ ಜ್ಯುವೆಲ್ಲರಿ ಉದ್ಘಾಟಿಸಲು ಬಂದ ಕುಂಭಮೇಳದ ಸಂತೆ ಸುಂದರಿ
- ದಿಢೀರನೆ ಸೆಲೆಬ್ರಿಟಿಯಾದ ಜೇನು ಕಂಗಳ ಚೆಲುವೆಗೆ
ಕೊಟ್ಟ ಉಡುಗೊರೆಗಳೇನು ಗೊತ್ತ - ಮಹಾ ಕುಂಭ ಮೇಳದ ಸಂತೆಯಿಂದ ಬಾಲಿವುಡ್ ಸಿನಿಮಾಂಗಣಕ್ಕೆ ಕಾಲೂರಿದ ‘ಮೊನಾಲಿಸ” ಳೆಂದೇ ಖ್ಯಾತಳಾದ ಮೋನಿ ಭೋಂಸ್ಲೆ ಖ್ಯಾತ ತಾರೆಯ ಪರಿವೇಷದೊಂದಿಗೆ ಕೇರಳಕ್ಕಾಗಮಿಸಿದಳು. ತನ್ನ ಸಹೋದರನ ಜತೆ ಕೇರಳದ ಕಲ್ಲಿಕೋಟೆ ತಲುಪಿದ ಈಕೆ “ಕೇರಳಕ್ಕೆ ಬರುವೆನೆಂದು ನಿರೀಕ್ಷಿಸಿರಲಿಲ್ಲವೆಂದೂ, ಜನರು ತೋರುವ ಪ್ರೀತಿಗೆ ತಲೆಬಾಗುವೆನೆಂದೂ ಹೇಳಿದರು.
ಕಲ್ಲಿಕೋಟೆಯಲ್ಲಿ ಚೆಮ್ಮನ್ನೂರ್ ಜ್ಯುವೆಲ್ಲರ್ಸ್ ನ ಹೊಸ ಶೋರೂಂ ಉದ್ಘಾಟನೆಗಾಗಿ ಜೇನುಗಣ್ಣಿನ ಸಂತೆ ಸುಂದರಿ ಮೊನಲಿಸಳನ್ನು ಕರೆಸಲಾಗಿತ್ತು. ಜ್ಯುವೆಲ್ಲರಿ ಮಾಲಕ ಬೋಬಿ ಚೆಮ್ಮನ್ನೂರು ಈಕೆಯನ್ನು ಆಹ್ವಾನಿಸಿದ್ದು, ಆಕೆ ಬರಲು ಸಮ್ಮತಿಸಿದ್ದನ್ನು ಜಾಲತಾಣದಲ್ಲಿ ಪ್ರಚಾರ ಮಾಡಲಾಗಿತ್ತು. ಇದರಂತೆ ಮೋನಿ ಭೋಂಸ್ಲೆಯನ್ನು ನೋಡಲು ಭಾರೀ ಜನ ಸೇರಿದ್ದರು. ಮಹಾ ಕುಂಭ ಮೇಳದಲ್ಲಿ ಸಂತೆಯಲ್ಲಿ ರುದ್ರಾಕ್ಷಿ. ಮಣಿ , ಮಾಲೆ ಮಾರುತ್ತಿದ್ದ ಈಕೆಯ ಕಂಗಳ ನೋಟದಿಂದಲೇ ಈಕೆ ಜಾಲತಾಣದ ಮೂಲಕ ವೈರಲ್ ಆಗಿದ್ದಳು. ತನ್ಮೂಲಕ ಬಾಲಿವುಡ್ ಸಿನಿಮಕ್ಕೂ ಆಯ್ಕೆಯಾದ ಸಂತೆಯ ಹುಡುಗಿ ಈಗ ಸೆಲೆಬ್ರಿಟಿಯಾಗಿ ಬದಲಾಗಿದ್ದಾಳೆ.
ಅಂದ ಹಾಗೆ ಚಿನ್ನದ ಮಳಿಗೆ ಮಾಲಕ ಬೋಬಿ ಚೆಮ್ಮನ್ನೂರ್ ಈ ವರೆಗೆ ಕೇರಳದ ಚಿತ್ರ ನಟಿಯರನ್ನಷ್ಟೇ ಆಹ್ವಾನಿಸಿ, ಅವರಿಗೆ ಆಭರಣಗಳನ್ನಿತ್ತು ಉಪಚರಿಸುತ್ತಿದ್ದರು. ಆದರೆ ಇದೀಗ ಈಕೆಗೆ ಏನನ್ನು ನೀಡುವರೆಂದು ಜಾಲತಾಣಿಗರು ಚರ್ಚಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ 15ಲಕ್ಷ ರೂ ನಗದು ಮತ್ತು ಪುಟ್ಟ ಚಿನ್ನಾಭರಣ ನೀಡುವ ಮಾತುಕತೆಯಾಗಿದೆಯೆಂದು ಹೇಳಲಾಗುತ್ತಿದೆ.