- ಕಣ್ವತೀರ್ಥ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಸುವರ್ಣ ಮಹೋತ್ಸವಕ್ಕೆ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಚಾಲನೆ
ಮಂಜೇಶ್ವರ :ಕಣ್ವತೀರ್ಥ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ
ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಶುಕ್ರವಾರ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಮಂಜೂರಾದ ನೂತನ ಕಟ್ಟಡವನ್ನು ಲೋಕಾರ್ಪಣೆಗೈದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ
ವಿದ್ಯಾಭ್ಯಾಸ ಸಚಿವ
ವಿ. ಶಿವನ್ ಕುಟ್ಟಿ ಮಾತನಾಡುತ್ತಾ ಸರಕಾರ ಜಾತಿ ಮತ ಧರ್ಮ ನೋಡದೆ ಅಭಿವೃದ್ಧಿಗೆ ಪೂರಕವಾಗಿರುವ ಧ್ಯೋತಕವಾಗಿದೆ ಈ ನೂತನ ಕಟ್ಟಡ ಅದನ್ನು ಜವಾಬ್ದಾರಿಯುತವಾಗಿ ಮುನ್ನಡೆಸುವ ಹೊಣೆಗಾರಿಕೆ ರಕ್ಷಕ ಶಿಕ್ಷಕರಾಗಿದೆ ಎಂದರು. ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಅಧ್ಯಕ್ಷತೆವಹಿಸಿದ್ದರು. ಕೆ ಡಿ ಪಿ ಸ್ಪೆಷಲ್ ಆಫೀಸರ್ ಚಂದ್ರನ್, ಡಿ. ಪಿ. ಸಿ. ವಿ. ವಿ. ರಮೇಶ್ ಪಂ.ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಸುಪ್ರಿಯಾ ಶೆಣೈ, ಪಂ.ಸದಸ್ಯ ರಾಜೇಶ್ ಮಜಲ್ ,ಜಿಲ್ಲಾ ಉಪನಿರ್ದೇಶಕ ಮಧುಸೂದನ್,ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ.ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ ಕೆ. ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಪದ್ಮನಾಭ ಎಂ ಅವರನ್ನು ಸಚಿವರು ಸನ್ಮಾನಿಸಿದರು.
ಸಭಾ ಕಾರ್ಯಕ್ರಮದ ಮುಂಚಿತವಾಗಿ ಬೆಳಗ್ಗೆ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೊ ಧ್ವಜಾರೋಹಣಗೈದರು. ಬಳಿಕ
ಸಬ್ಕಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ
ಮುನೀರ್ ಕೆ ಎಸ್.
ಶಾಲಾ ಪ್ರವೇಶದ್ವಾರ ಉದ್ಘಾಟಿಸಿದರು.
ನವೀಕರಣಗೊಂಡ ಶಾಲಾ ಆಟದ ಮೈದಾನದ ಉದ್ಘಾಟನೆಯನ್ನು ರಘು ಶೆಟ್ಟಿ ಕುಂಜತ್ತೂರು ನೆರೆವೇರಿಸಿದರು.
ಶಾಲಾ ಮಿನಿ ಪಾರ್ಕ್ ಉದ್ಘಾಟನೆಯನ್ನು ಪ್ರಿಯಾ ಮೊಯಿದ್ದೀನ್ ಕುಂಞ ನಡೆಸಿದರು.
ಶಾಲಾ ಸಭಾ ಮಂಟಪವನ್ನು ಯು. ಕೆ. ಮೊಹಮ್ಮದ್ ಉದ್ಘಾಟಿಸಿದರು.