- ಸಮರಕಲೆ ಕಳರಿ ವಿದ್ಯೆ ಕಲಿಯಲು ಬಂದ ವಿದೇಶಿ ಜೋಡಿಗಳಿಗೆ ಕತ್ತಿ ವರಸೆಯ ನಡುವೆ ಪ್ರೇಮಾಂಕುರ..
- ವಿದೇಶದಿಂದ ತಾಯ್ತಂದೆಯರನ್ನು ಕರೆಸಿ, ಕೇರಳದ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ
- ಪ್ರಾಚೀನ ಸಮರಕಲೆಯಾದ ಕಳರಿ ವಿದ್ಯೆ ಕಲಿಯಲೆಂದು ಕೇರಳಕ್ಕೆ ಬಂದ ವಿದೇಶ ಜೋಡಿಗಳು ಕತ್ತಿವರಸೆಯ ನಡುವೆ ಪ್ರೇಮಾಂಕುರವಾಗಿ ಕೊನೆಗೆ ಹಿಂದೂ ಸಂಪ್ರದಾಯದಂತೆ ವಿವಾಹಿತರಾದ ಘಟನೆ ನಡೆದಿದೆ. ಯಾರ ಮದುವೆ ಯಾರ ಜೋತೆಗೋ ವಿಧಿ ನಿರ್ಣಯಿಸಿರುತ್ತದೆ ಅನ್ನೋದು ಇದನ್ನೇ ಅಲ್ಲವೇ…?
ಅವರು ಕಳರಿ(ಕತ್ತಿ ವರಸೆ) ಮತ್ತು ಯೋಗ ಕಲಿಯಲೆಂದು ಬೇರೆ ದೇಶಗಳಿಂದ ಕೇರಳಕ್ಕೆ ಬಂದವರು. ಕಲಿಕೆಯ ಮಧ್ಯೆ ಕಂಡರು, ಸ್ನೇಹಿತರಾದರು. ಕೊನೆಗೆ ಪ್ರೇಮಿಗಳಾಗಿ ಮದುವೆಯಾಗಲು ನಿರ್ಧರಿಸಿದರು. ಬಳಿಕ ವಿದೇಶದಲ್ಲಿರುವ ತಮ್ಮ ಬಂಧು,ಮಿತ್ರರಿಗೂ, ಕೇರಳದಲ್ಲಿ ಪರಿಚಿತರಾದ ಸ್ನೇಹಿತರಿಗೆಲ್ಲಾ ಹೇಳಿ ಮದುವೆಗೆ ಆಹ್ವಾನಿಸಿದರು. ಇದರಂತೆ ನಿನ್ನೆ ಬೆಳಿಗ್ಗೆ 10ರಿಂದ 10.25ರ ನಡುವಣ ಮುಹೂರ್ತದಲ್ಲಿ ವಿಳಿಂಜಂ ದೇವಿ ಕ್ಷೇತ್ರದಲ್ಲಿ ವಿವಾಹಿತರಾದರು. ಡೆನ್ಮಾರ್ಕ್ ನಿವಾಸಿ ಕಾಮಿಲಿ ಹಾಗೂ ಅಮೇರಿಕಾದ ಇಲ್ಲಿನೊಯಿಸ್ ನಿವಾಸಿ ಡೊಮಿನಿಕ್ ಎಂಬಿವರೇ ಹಿಂದೂ ವಿಧಾನದಂತೆ ಕೇರಳದಲ್ಲಿ ಮದುವೆಯಾದ ನವದಂಪತಿಯರು.
ಇಬ್ಬರೂ ಕೇರಳಕ್ಕೆ ಬಂದದ್ದು ಕಳರಿ ವಿದ್ಯೆಯನ್ನು ಕರಗತ ಮಾಡಬೇಕೆಂಬ ಉದ್ದೇಶದಿಂದ. ಈ ನಡುವೆ ಕಳರಿಯ ಮಹಿಮೆ ಅರಿಯುತ್ತಾ ಹಿಂದೂ ಆಚಾರ, ಧರ್ಮದತ್ತ ಆಕರ್ಷೀತರಾದರು. ಪರಿಪೂರ್ಣವಾದ ಹಿಂದೂ ಸಂಪ್ರದಾಯದಲ್ಲೇ ವಿವಾಹವಾದರು.
ಪವದಂಪತಿಗಳಿಬ್ಬರೂ ತಮ್ಮ ತಾಯ್ತಂದೆಯರ ಸಮ್ಮುಖದಲ್ಲೇ ಮಾಂಗಲ್ಯ ಧಾರಣೆ ಮಾಡಿದರು. ದೇವಾಲಯದ ಅರ್ಚಕ ಅನಿಲ್ ಕುಮಾರ್ ವಿವಾಹ ನೆರವೇರಿಸಿದರು.