- ತುಳುನಾಡಿಗೆ ಬಂದು ಧರ್ಮದೈವ ಜಾರಂದಾಯನ ಮುಂದೆ ಕೈಮುಗಿದು ನಿಂತ ತಮಿಳು ನಟ ವಿಶಾಲ್
- 3ತಾಸು ಕೋಲನೋಡಿ ಕೊಡಿಯಡಿಯಲ್ಲಿ ಕುಟುಂಬ ಸಮೇತ ಪ್ರಾರ್ಥಿಸಿ ಹರಕೆ ಹೊತ್ತದ್ದೇನು ಬಲ್ಲಿರಾ..?
- ಇಷ್ಟಕ್ಕೂ ಕಾರಣವಾದದ್ದೇ “ಕಾಂತಾರದ ಪ್ರಭಾವ..!
ತಮಿಳು ಚಿತ್ರರಂಗದ ಜನಪ್ರಿಯ ಯುವನಟ ವಿಶಾಲ್ ತುಳುನಾಡಿನ ದೈವಕ್ಕೆ ತಲೆತಗ್ಗಿಸಿ ಪ್ರಾರ್ಥಿಸಿದ್ದಾರೆ. ಇಡೀ ನೇಮದಲ್ಲಿ ಭಕ್ತಿಯಿಂದ ಪಾಲ್ಗೊಂಡಿದ್ದಾರೆ. ಮಂಗಳೂರು ಸಮೀಪದ ಪಕ್ಷಿಕೆರೆ ಪಂಜ -ಕೊಯ್ಕುಡೆ ಎಂಬಲ್ಲಿ ನ ಹರಿಪಾದೆಯಲ್ಲಿ ನಡೆದ ಧರ್ಮದೈವ ಜಾರಂದಾಯನ ನೇಮದಲ್ಲಿ ಪಾಲ್ಗೊಂಡ ವಿಶಾಲ್ ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ ಮೂರು ತಾಸುಗಳ ಕೋಲ ಕಣ್ತುಂಂಬಿದರು.
ತಮಿಳಿನ ಪ್ರಸಿದ್ದ ಯುವನಟನಾದ ವಿಶಾಲ್ ಅವರು ಮಂಗಳವಾರವೇ ಮಂಗಳೂರು ಬಂದು ಕರಾವಳಿಯ ಕ್ಷೇತ್ರ ದರ್ಶನದಲ್ಲಿದ್ದಾರೆ. ಮಂಗಳವಾರ ಅವರು ಕೊಲ್ಲೂರು, ಉಡುಪಿ ದೇಗುಲಕ್ಕೆ ಭೇಟಿ ಇತ್ತರು. ಇ ಮಧ್ಯೆ ರಾತ್ರಿ ಕಾರಣಿಕದ ದೈವವೆಂದೇ ಹೆಹರಾದ ಪಕ್ಷಿಕೆರೆಯ ಜಾರಂದಾಯ ಕ್ಷೇತ್ರಕ್ಕೆ ಭೇಟಿ ಇತ್ತರು. ದೈವ ಕೋಲ ನೋಡಿ ಪ್ರಾರ್ಥನೆ ಸಲ್ಲಿಸಿದರು.
ನಟ ವಿಶಾಲ್ ರಾತ್ರಿ 10.30ಕ್ಕೆ ಗಂಟೆಯ ವೇಳೆಗೆ ದೈವಸ್ಥಾನಕ್ಕೆ ಆಗಮಿಸಿದರು. ಈ ವೇಳೆ ದೈವದ ಗಗ್ಗರ ಸೇವೆಗೆ ಅಣಿಯಾಗುತಿತ್ತು. ಕೈಯಲ್ಲಿ ಮಲ್ಲಿಗೆ ಚೆಂಡು ಹಿಡಿದೇ ಬಂದಿದ್ದ ವಿಶಾಲ್ ಭಕ್ತಿಯಿಂದ ಪಾಲ್ಗೊಂಡರಲ್ಲದೇ ಮಾಹಿತಿಗಳನ್ನೆಲ್ಲಾ ಕೇಳಿತಿಳಿದರು. ಬಳಿಕ ಅವರನ್ನು ದೈವದ ಕೊಡಿಯಡಿಗೆ ಕರೆಸಿ ಪ್ರಸಾದ ನೀಡಲಾಯಿತು. ಈ ವೇಳೆ ತನ್ನ ಆರೋಗ್ಯ ವೃದ್ಧಿಗೆ ಅನುಗ್ರಹ ಕೋರಿ ಅವರು ಪ್ರಾರ್ಥಿಸಿದರು. ಈ ವೇಳೆ ದೈವಪಾತ್ರಿಗಳು “ನೀವು ಆರೋಗ್ಯ ವೃದ್ಧಿಯೊಂದಿಗೆ ಸಿನಿಮ ರಂಗದಲ್ಲಿ ಮಿಂಚುವಿರೆಂದೂ, ಮುಂದಿನವರ್ಷ ಬಂದು ದೈವಕ್ಕೆ ಕಾಣಿಕೆ ಇತ್ತು, ಕ್ಷೇತ್ರದಲ್ಲಿ ತುಲಾಭಾರ ನಡೆಸುವಂತೆಯೂ ಸಲಹೆ ಇತ್ತರು. ಬಳಿಕ ರಾತ್ರಿ 1ರ ಸುಮಾರಿಗೆ ಕುಟುಂಬ ಸಹಿತ ವಿಶಾಲ್ ನಿರ್ಗಮಿಸಿದರು.
ನಾನು ಕಾಂತಾರ ಸಿನಿಮ ಮೂಲಕ ದೈವ ದರ್ಶನವನ್ನು ಮೊದಲ ಬಾರಿಗೆ ನೋಡಿದೆ. ಈ ಮೂಲಕವಷ್ಟೇ ತುಳುನಾಡನ್ನು ತಿಳಿದಿದ್ದೆ. ಕರಾವಳಿಯ ಕ್ಷೇತ್ರ ದರ್ಶನಕ್ಕಾಗಿ ಬಂದಾಗ ಅದೃಷ್ಟ ವಶಾತ್ ದೈವದರ್ಶನ ನೋಡುವ, ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಇದು ನಮ್ಮ ನೆಲಮೂಲದ ಸಂಸ್ಕೃತಿ. ಮುಂದಿನ ವರ್ಷವೂ ಇಲ್ಲಿನ ದೈವಕೋಲಕ್ಕೆ ಬರುವೆ.
-ನಟ ವಿಶಾಲ್