ಉಪ್ಪಳ ಪೇಟೆಯ ಕಟ್ಟಡವೊಂದರ ವಾಚ್ ಮೆನ್ ಪಯ್ಯನ್ನೂರು ನಿವಾಸಿ ಸುರೇಶ್(45) ಎಂಬವರನ್ನು ಇರಿದು ಕೊಲೆಗೈದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಉಪ್ಪಳ ಪತ್ವಾಡಿ ನಿವಾಸಿ ಸವಾದ್(23)ಎಂಬಾತನನ್ನು
ಮಂಜೇಶ್ವರ ಠಾಣಾಧಿಕಾರಿ ಅನೂಬ್ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಯಿತು.
ಮೃತ ಸುರೇಶ್ ಮೂಲತಃ ಕೊಲ್ಲಂ ನಿವಾಸಿಯಾಗಿದ್ದು, 15ವರ್ಷಗಳಿಂದ ಪಯ್ಯನ್ನೂರಿನಲ್ಲಿ ವಾಸಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಉಪ್ಪಳದಲ್ಲಿ ಸೆಕ್ಯೂರಿಟಿ ನೌಕರನಾಗಿ ದುಡಿಯುತ್ತಿದ್ದರು. ಈ ನಡುವೆ ಆರೋಪಿ ಸವಾದ್ ನ ಪರಿಚಯವಾಗಿ ಕ್ಷುಲ್ಲಕ ಮಾತುಗಳಿಂದ ವಿರೋಧ ಹುಟ್ಟಿತ್ತು. ಮಂಗಳವಾರ ರಾತ್ರಿ ಇವರಿಬ್ಬರೊಳಗೆ ವಾಗ್ವಾದ ನಡೆದು, ಆರೋಪಿ ಸವಾದ್ ಇರಿದು ಕೊಲೆಗೈದನು.
ಕೊಲೆ ನಡೆದ ಕೂಡಲೇ ಸ್ಥಳದಿಂದ ಪರಾರಿಯಾಗಿ ತಲೆಮರೆಸಿಕೊಂಡ ಆರೋಪಿಯ ಪತ್ತೆ, ಬಂಧನಕ್ಕಾಗಿ ಜಿಲ್ಲಾ ಪೋಲೀಸ್ ವರಿಷ್ಠರ ನೇತೃತ್ವದಲ್ಲಿ ಮೂರು ತನಿಖಾ ತಂಡಗಳನ್ನು ರಚಿಸಲಾಗಿತ್ತು. ಆರೋಪಿ ಕರ್ನಾಟಕದಲ್ಲಿ ತಲೆ ಮರೆಸುವ ಸಾಧ್ಯತೆ ಮನಗಂಡು ಎರಡು ತಂಡ ಕರ್ನಾಟಕದಲ್ಲೂ, ಒಂದು ತಂಡ ಇರೋಪಿಯ ಸಂಬಂಧಿಕರ ಮನೆಗಳಲ್ಲೂ ಹುಡುಕಾಟ ನಿರತವಾಯಿತು. ಈ ಮಧ್ಯೆ ನಿನ್ನೆ ರಾತ್ರಿ ಮಂಜೇಶ್ವರದ ಸಂಬಂಧಿಕರ ಮನೆಗೆ ಆರೋಪಿ ಬರುವನೆಂಬ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ಆರೋಪಿಯನ್ನು 24 ತಾಸಿನೊಳಗೆ ಬಂಧಿಸಲು ಸಾಧ್ಯವಿಯಿತು.