52
ಕುಂಬಳೆ : ಬಿಜೆಪಿ ಕುಂಬಳೆ ಮಂಡಲ ಸಮಿತಿ ವತಿಯಿಂದ ರಾಷ್ಟ್ರಕ್ಕಾಗಿ ಜೀವನವನ್ನು ಅರ್ಪಿಸಿದ ಬಿಜೆಪಿಯ ಸ್ಥಾಪಕ ಅಧ್ಯಕ್ಷರು, ಶ್ರೇಷ್ಠ ನಾಯಕರು, ಸಂಘಟನಾ ಚತುರ ಪ್ರಖರ ವಾಗ್ಮಿ, ರಾಜಕೀಯ ಚಿಂತಕರಾದ ಶ್ರೀ ಪಂಡಿತ್ ದಿನದಯಾಳ ಉಪಾದ್ಯಾಯರವರ ಪುಣ್ಯ ಸ್ಮರಣೆಯನ್ನು ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷರಾದ ಸುನೀಲ್ ಅನಂತಪುರ ವಹಿಸಿದರು. ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ಮುರಳೀಧರ ಯಾದವ ಉದ್ಘಾಟಿಸಿ ಪಂಡಿತ್ ದಿನದಯಾಳ ಉಪಾದ್ಯಾಯರ ವರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ನೂತನವಾಗಿ ಮಂಡಲ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಶಾಲು ಹಾಕಿ ಸನ್ಮಾನಿಸಲಾಯಿತು.ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಕುಮಾರ ಮಯ್ಯ ಸ್ವಾಗತಿಸಿ ಕಾರ್ಯದರ್ಶಿ ಸುಮಿತ್ ರಾಜ ಪೆರ್ಲ ವಂದಿಸಿದರು.