- ದೆಹಲಿ ಗೆಲುವು : ಕಾಸರಗೋಡು ನಗರದಲ್ಲಿ ಬಿಜೆಪಿಯ ವಿಜಯೋತ್ಸವ
- ಪೊರಕೆ ಹಿಡಿದು ಬಂದ ಭ್ರಷ್ಟಾಚಾರಿಯಿಂದ ದೆಹಲಿಗೆ ಮುಕ್ತಿ : ಇನ್ನು ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಯುಗ :ಎಂ.ಎಲ್.ಅಶ್ವಿನಿ
ಭ್ರಷ್ಟಾಚಾರದ ವಿರುದ್ಧ ಜನಪರ ಹೋರಾಟ ನಡೆಸಿ, ಜನರಲ್ಲಿ ಭರವಸೆಯ ನಂಬಿಕೆ ಮೂಡಿಸಿ , ಅದರ ಫಲಾನುಭವಿಯಾಗಿ ಅಧಿಕಾರದ ಗದ್ದುಗೆಯೇರಿದ ಅರವಿಂದ ಕೇಜರೀವಾಲ್ ತಾನೇ ಭ್ರಷ್ಟಾಚಾರದ ಬ್ರಹ್ಮಾಂಡ ಸ್ವರೂಪಿಯಾಗಿ ಅವತರಿಸಿದ್ದು ವಿಪರ್ಯಾಸ. ಇದರ ವಿರುದ್ಧ ಜನತೆ ನೀಡಿದ ಜನಾದೇಶವೇ ದೆಹಲಿಯ ಫಲಿತಾಂಶ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಘಟಕದ ವತಿಯಿಂದ ಕಾಸರಗೋಡು ನಗರದಲ್ಲಿ ಏರ್ಪಡಿಸಿದ ದೆಹಲಿ ಫಲಿತಾಂಶದ ವಿಜಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ದೆಹಲಿಯ ಜನತೆಗೆ ದುರಾಡಳಿತದಿಂದ ಮುಕ್ತಿ ಸಿಕ್ಕಿದೆ. ಇನ್ನು ಅಭಿವೃದ್ಧಿಯ ಡಬಲ್ ಇಂಜಿನ್ ಸರ್ಕಾರದ ಆಡಳಿತದಿಂದ ದೆಹಲಿ ಅಭಿವೃದ್ಧಿ ಕಾಣಲಿದೆ.
ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟದಿಂದ ಹೊರಬಂದು ಪ್ರತ್ಯೇಕ ಸ್ಪರ್ಧಿಸಿದರೂ, ಕೇಜರಿವಾಲ್ ನೇತೃತ್ವದ ಅಂ ಆದ್ಮಿ ಪಕ್ಷದ ಮೇಲೆ ಜನತೆ ನಂಬಿಕೆಯನ್ನೇ ಕಳಕೊಂಡು ಬಿಜೆಪಿಯ ಕೈಗೆ ಅಧಿಕಾರದ ಚುಕ್ಕಾಣಿ ನೀಢಿದರೆಂದು ಅವರು ಹೇಳಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಪಿ.ರಮೇಶ್ ಎಂ.ಬಾಲರಾಜ್, ಸವಿತಾ ಟೀಚರ್, ಎಂ.ಬಾಲಕೃಷ್ಣ ಶೆಟ್ಟಿ, ಸತೀಶ್ಚಂದ್ರ ಭಂಡಾರಿ, ಎನ್.ಬಾಬುರಾಜ್, ವಿ.ರವೀಂದ್ರನ್, ಗುರುಪ್ರಸಾದ್ ಪ್ರಭು, ಶೈನಿಮೋಳ್, ಪ್ರಶಾಂತ್ ಮೊದಲಾದವರು ವಿಜಯೋತ್ಸವಕ್ಕೆ ನೇತೃತ್ವ ಇತ್ತರು.