ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ, ಅಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರೀವಾಲ್ ಅವರನ್ನು ಸೋಲಿಸುವ ಮೂಲಕ ಗಮನಸೆಳೆದು, ಬಿಜೆಪಿಯ ಸಂಭಾವ್ಯ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿರುವ ನಾಯಕ ವರ್ವೇಷ್ ವರ್ಮಾ ಅವರು “ಯಮುನಾ ನದಿಯ ಸ್ವಚ್ಛತೆ ಮತ್ತು ಶುದ್ಧತೆಗೆ ಗರಿಷ್ಠ ಆದ್ಯತೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಹುಟ್ಟೂರಾದ ಮುಂಡಕದಲ್ಲಿ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಾ ಅವರು ತಂದೆಯವರ ಕನಸನ್ನು ನನಸಾಗಿಸಬೇಕು, ಅವರ ಅಪೂರ್ಣ ಯೋಜನೆಗಳನ್ನು ಪೂರ್ಣಗೊಳಿಸಲು ಬದ್ಧನಾಗುವೆ ಎಂದರು. ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ವರ್ಮ ಅವರು ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಅರವಿಃದ ಕೇಜ್ರೀವಾಲ್ ಅವರನ್ನು ಪರ್ವೀಶ್ ವರ್ಮಾ ಅವರು 4,089ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು. ಈ ಮೂಲಕ ಅಮ್ ಆದ್ಮಿ ಪಾರ್ಟಿಗೆ ಬಹುದೊಡ್ಡ ಹೊಡೆತ ನೀಡಿದ ಪರ್ವೇಷ್ ವರ್ಮಾ ಅವರು 2014ರಿಂದ 2024ರ ತನಕ ಪಶ್ಚಿಮ ದೆಹಲಿಯಿಂದ ಸಂಸದರಾಗಿದ್ದರು.