- ಪತ್ನಿಯ ಖಾಯಿಲೆ : ಚಿಕಿತ್ಸಾ ವೆಚ್ಚ ಭರಿಸಲಾಗದೇ ‘ಪದ್ಮಶ್ರೀ’ ಮಹಾಲಿಂಗ ನಾಯ್ಕರಿಗೆ ಸಂಕಷ್ಟ
- ಉನ್ನತ ಚಿಕಿತ್ಸಾ ನೆರವಿಗೆ ದಾನಿಗಳ ಸಹಾಯದ ನಿರೀಕ್ಷೆ
ಬತ್ತಿದ ನೆಲದಲ್ಲಿ ಏಳು ಸುರಂಗ ಕೊರೆದು ನೀರು ಹರಿಸಿದ ಆಧುನಿಕ ಭಗೀರಥ , ಕೇಪು ಗ್ರಾಮದ ಪದ್ಮಶ್ರೀ ಮಹಾಲಿಂಗ ನಾಯ್ಕ್ ಸಂಕಷ್ಟದಲ್ಲಿದ್ದಾರೆಂದು ವರದಿಯಾಗಿದೆ. ಅವರ ಪತ್ನಿ ಯ ಅನಾರೋಗ್ಯದಿಂದ ಚಿಕಿತ್ಸಾ ವೆಚ್ಚ ಭರಿಸಲಾಗದೇ ಅವರು ಕಷ್ಟಕ್ಕೆ ಸಿಲುಕಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಬರಡು ಗುಡ್ಡೆಯಲ್ಲಿ ಸುರಂಗ ಕೊರೆದು ನೀರು ಹಾಯಿಸಿ ಕೃಷಿ ತೋಟ ನಳನಳಿಸುವಂತೆ ಮಾಡಿದ ಇವರ ಏಕಾಂಗಿ ಸಾಧನೆಗೆ ಕೇಂದ್ರ ಸರಕಾರ ಪದ್ಮಶ್ರೀ ನೀಡಿ ಗೌರವಿಸಿತ್ತು. ಪ್ರಸ್ತುತ ಇವರ ಪತ್ನಿಗೆ ತಲೆಯ ನರದ ಸಮಸ್ಯೆ ಕಾಡಿದೆ. ಕೈಯ್ಯಲ್ಲಿದ್ದ ದುಡ್ಡೆಲ್ಲ ಈಗಾಗಲೇ ಚಿಕಿತ್ಸೆಗೆ ವ್ಯಯವಾಗಿದೆ. ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿದ್ದ ಅವರನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯವಂತೆ ವೈದ್ಯರು ನಿರ್ದೇಶಿಸಿದ್ದಾರೆ. ಆದರೆ ಉನ್ನತ ಚಿಕಿತ್ಸೆಗೆ ವ್ಯಯಿಸಲು ದುಡ್ಡಿಲ್ಲದೇ ಅವರು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಈಗಾಗಲೇ ಮಾಲಿಂಗ ನಾಯ್ಕರು ಅವರಿವರಿಂದ ಪಡೆದದ್ದೂ ಸೇರಿದಂತೆ ಚಿಕಿತ್ಸೆಗೆ 2.65ಲಕ್ಷ ರೂ ವ್ಯಯಿಸಿದ್ದಾರೆ. ಅವರ ಪತ್ನಿಯ ತಲೆಗೆ ಈಗಾಗಲೇ ಶಸ್ತ್ರ ಚಿಕಿತ್ಸೆಯೂ ನಡೆದಿದೆ. ಉನ್ನತ ಚಿಕಿತ್ಸೆಗೆ ಇನ್ನಷ್ಟು ಹಣ ಹೊಂದಿಸುವುದೆಲ್ಲಿಂದ ಎಂದರಿಯದೇ ಮಹಾಲಿಂಗ ನಾಯ್ಕರು ಕಂಗಾಲಾಗಿದ್ದಾರೆ.
ಸಂಪರ್ಕ – ಮಹಾಲಿಂಗ ನಾಯ್ಕ – 9449981747