ಕುಂಬಳೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಯ್ಯಪ್ಪ ದೇವಸ್ಥಾನಕ್ಕೆ ಎಪ್ರೀಲ್ 25ರಿಂದ 30ರ ತನಕ ಬ್ರಹ್ಮಕಲಶೋತ್ಸವ

ಆರು ದಿನಗಳ ಕಾರ್ಯಕ್ರಮಕ್ಕೆ ಬ್ರಹ್ಮಕಲಶ ಸಮಿತಿಯಿಂದ ಪೂರ್ವ ಸಿದ್ಧತೆ

by Narayan Chambaltimar
  • ಕುಂಬಳೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಯ್ಯಪ್ಪ ದೇವಸ್ಥಾನಕ್ಕೆ ಎಪ್ರೀಲ್ 25ರಿಂದ 30ರ ತನಕ ಬ್ರಹ್ಮಕಲಶೋತ್ಸವ
  • ಆರು ದಿನಗಳ ಕಾರ್ಯಕ್ರಮಕ್ಕೆ ಬ್ರಹ್ಮಕಲಶ ಸಮಿತಿಯಿಂದ ಪೂರ್ವ ಸಿದ್ಧತೆ

ಕುಂಬಳೆಯ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಸ್ಥಳಾಂತರಿಸಲ್ಪಟ್ಟು, ಶೇಡಿಕಾವಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಅಯ್ಯಪ್ಪ ದೇವಸ್ಥಾನದ ನೂತನ ಬಿಂಬ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಎಪ್ರೀಲ್ 25ರಿಂದ 30ರ ತನಕ ಜರಗಲಿದೆ.

ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ಹಿಂಭಾಗದಲ್ಲಿ ಶಾಂತಿಕುಠೀರ ಮತ್ತು ರೈಲ್ವೇ ಹಳಿಯ ಒತ್ತಿನಲ್ಲಿದ್ದ ಅಯ್ಯಪ್ಪ ಗುಡಿಯು ಇದೀಗ ಶೇಡಿಕಾವಿನಲ್ಲಿ ನೂತನ, ಭವ್ಯ ದೇವಾಲಯವಾಗಿ ಮರು ನಿರ್ಮಾಣಗೊಂಡಿದೆ. ಕುಂಬಳೆ ಪರಿಸರದ ಏಕೈಕ ಅಯ್ಯಪ್ಪ ಕ್ಷೇತ್ರದ ಬ್ರಹ್ಮಕಲಶವು ಆರು ದಿನಗಳ ಕಾರ್ಯಕ್ರಮವಾಗಿ ಬ್ರಹ್ಮಶ್ರೀ ಕಲ್ಕುಲ ಬೀಡು ಶಂಕರನಾರಾಯಣ ಕಡಮಣ್ಣಾಯರ ಕರ್ಮಿಕತ್ವದಲ್ಲಿ ಜರಗಲಿದ್ದು, ಕಾರ್ಯಕ್ರಮಗಳ ರೂಪುರೇಷೆಗೆ ಬ್ರಹ್ಮಕಲಶ ಸಮಿತಿಯ ಸಮಾಲೋಚನಾ ಸಭೆ ಜರುಗಿತು.


ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಶಂಕರ ಆಳ್ವ ಕೋಟೆಕಾರು ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ರೂಪುರೇಷೆಗಳನ್ನು ವಿವರಿಸಿದರು.
ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣ, ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ ಮಡ್ವ ಮಂಜುನಾಥ ಆಳ್ವ ಮಾರ್ಗದರ್ಶನವಿತ್ತು ಮಾತನಾಡಿದರು. ನವೀನ್ ಪೂಜಾರಿ ಕೋಟೆಕಾರು ಅಧ್ಯಕ್ಷತೆ ವಹೀಸಿದರೂ. ಪತ್ರಕರ್ತ ಎಂ.ನಾ. ಚಂಬಲ್ತಿಮಾರ್ ಉಪಸ್ಥಿತರಿದ್ದು, ಮಾತನಾಡಿದರು. ರಾಮಚಂದ್ರ ಗಟ್ಟಿ ಸ್ವಾಗತಿಸಿ, ರಾಮ ಕಾರ್ಲೆ ವಂದಿಸಿದರು. ಅಯ್ಯಪ್ಪ ಭಕ್ತವೃಂದದ ಅನೇಕರು ಉಪಸ್ಥಿತರಿದ್ದರು.

ಬ್ರಹ್ಮಕಲಶದ ಸಂದರ್ಭ ದೈನಂದಿನ ಭಜನಾ ಸಂಕೀರ್ತನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಎರಡೂ ಹೊತ್ತು ಅನ್ನಸಂತರ್ಪಣೆ ನಡೆಯಲಿವೆ. ಕಾರ್ಯಕ್ರಮಗಳನ್ನು ಅತ್ಯಧಿಕ ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಯಶಸ್ವಿಗೊಳಿಸಲು ನಾಡಿನ ಅಯ್ಯಪ್ಪ ಭಕ್ತ ವೃಂದವನ್ನೆಲ್ಲಾ ಒಗ್ಗೂಡಿಸಲು ಸಭೆ ತೀರ್ಮಾನಿಸಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00