- ಪಶ್ಚಿಮಘಟ್ಟದ ಮೂಲಕ ಹಾಸನ – ಮಂಗಳೂರು ನಡುವೆ ಹೊಸ ರೈಲುಮಾರ್ಗ ನಿರ್ಮಾಣಕ್ಕೆ ಯೋಜನೆ
- ಟೆಂಡರ್ ಕರೆದ ನೈರುತ್ವ ರೈಲ್ವೇ :ಒಂದು ವರ್ಷದೊಳಗೆ ಯೋಜನಾ ವರದಿ ಒಪ್ಪಿಸಲು ನಿರ್ದೇಶ
ಪಶ್ಚಿಮಘಟ್ಟದಲ್ಲಿ ನಿರಂತರ ಭೂಕುಸಿತ ಸಂಭವಿಸುತ್ತಿದ್ದು, ಇದು ರೈಲು ಸಂಚಾರವನ್ನು ಪದೇ,ಪದೇ ಕಾಡುವುದರಿಂದ ಹಾಸನ -.ಮಂಗಳೂರು ನಡುವೆ ಹೊಸ ರೈಲು ಮಾರ್ಗ ನಿರ್ಮಿಸಲು ರೈಲ್ವೇ ಇಲಾಖೆಮುಂದಾಗಿದೆ. ಈ ಸಂಬಂಧ ಅಂತಿಮ ಸ್ಥಳ ಸಮೀಕ್ಷೆ ನಡೆಸಲು ಟೆಂಡರ್ ಕರೆಯಲಾಗಿದೆ. ಇದು ಕರಾವಳಿಯ ವಾಣಿಜ್ಯ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ..
ಹಾಸನ ಮಂಗಳೂರು ನಡುವೆ 247 ಕಿ.ಮೀ ಉದ್ದದ ಹೊಸ ರೈಲು ಹಳಿ ಮತ್ತು ಗೋವಾದ. ಕ್ಯಾಸಲ್ರಾಕ್ – ಕುಲೆಮ್ ನಡುವಣ 72 ಕಿಮಿ ದೂರದ ಹೊಸ ಜೋಡಿ ಮಾರ್ಗ ನಿರ್ಮಾಣದ ಸ್ಥಳ ಸಮೀಕ್ಷೆಗೆ 21.36ಕೋಟಿ ರೂಗಳ ಟೆಂಡರ್ ಕರೆಯಲಾಗಿದೆ.
ಹಾಸನ – ಮಂಗಳೂರು ನೂತನ ರೈಲು ಮಾರ್ಗ ಕ್ಕೆ ವಿವರವಾದ ಯೋಜನಾವರದಿ, ಭೂಮಿಯ ತಾಂತ್ರಿಕ ಅಧ್ಯಯನ, ಸಿಗ್ನಲ್ ಕೆಲಸಗಳು, ಸಿಂಗಲ್/ಡಬಲ್ ಮಾರ್ಗದ ಕುರಿತು ಒಂದು
ವರ್ಷದೊಳಗೆ ಅಧ್ಯಯಧ ನಡೆಸಿದ ಅಂತಿಮ ಯೋಜನಾ ವರದಿ ತಯಾರಿಸಲು ರೈಲ್ವೇ ನೀರ್ದೇಶಿಸಿ ಟೆಂಡರ್ ಆಹ್ವಾನಿಸಲಾಗಿದೆ.
ಸದ್ಯದ ಮಾರ್ಗದಲ್ಲಿ ಮಂಗಳೂರು – ಹಾಸನ ನಡುವೆ 189 ಕೀ
ಮಿ.ದೂರವಿದೆ. ಉದ್ದೇಶಿತ ನೂತನ ರಸ್ತೆಯಲ್ಲದು 247 ಕೀ.ಮಿ ಆಗಬಹುದೆಂದು ಅಂದಾಜಿಸಲಾಗಿದೆ. ಹಾಸನ, ಮಂಗಳೂರು ಮಧ್ಯೆಗಿನ ಮಾರ್ಗದ ಸಾಮರ್ಥ್ಯ ಹೆಚ್ಚಿಸಲು ಒತ್ತಾಯಿಸುತ್ತಲೇ ಬಂದಿದ್ದು, ರೈಲ್ವೇ ಅದನ್ನುಪರಿಗಣಿಸಿರುವುದಕ್ಕೆ ಇಲಾಖೆಗೆ, ಸಚಿವರಿಗೆ ಅಭಿನಂದಿಸುತ್ತೇನೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟಿ ರಸ್ತೆಗಳು ಹಾಗೂ ಪಶ್ಚಿಮಘಟ್ಟದ ರೈಲು ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿ ರೈಲು ಸಂಚಾರಕ್ಕೆಪದೇಪದೇ ಅಡತಡೆ ಉಂಟಾಗುತ್ತಿದೆ. ಇದು ಕರಾವಳಿಯಿಂದ ಬೆಂಗಳೂರು ಸಂಪರ್ಕವನ್ನು ಬಾಧಿಸುತ್ತಿತ್ತು. ಮಂಗಳೂರಿನ ವಾಣಿಜ್ಯ,ವ್ಯವಹಾರಗಳ ಮೇಲೆ ಪರಿಣಾಮ ಬೀರುತಿತ್ತು. ಈ ಹಿನ್ನೆಲೆಯಲ್ಲಿ ಹೊಸ ಮಾರ್ಗದ ಅನ್ವೇಷಣೆ ಭರವಸೆ ಮೂಡಿಸುವ ಕಾಯಕವಾಗಿದೆ.