- ಸಲುಗೆ ಬೆಳೆಸಿ ಬೆತ್ತಲೆ ಪೋಟೋ, ಅಶ್ಲೀಲ ಸಂಭಾಷಣೆಯ ನಗ್ನ ವೀಡಿಯೋ ಕಾಲ್ ಪಡೆದು ಪ್ರಚಾರ,ಮಾಡುವುದಾಗಿ ಬೆದರಿಕೆ
- 10ಲಕ್ಷ ರೂ ಪಡೆದು ವಂಚಿಸಿದ ಯಕ್ಷಗಾನ ಸ್ತ್ರೀವೇಷಧಾರಿಯ ಬಂಧನ
ಯುವ ಯಕ್ಷಗಾನ ಕಲಾವಿದ, ಪ್ರಮುಖ ಸ್ತ್ರೀವೇಷಧಾರಿ ಅಶ್ಶಥ್ ಆಚಾರ್ಯ ಕೊಳಂಬೆ
ಎಂಬಾತನನ್ನು ಬದಿಯಡ್ಕ ಪೋಲೀಸರು ಬಂಧಿಸಿದ್ದಾರೆ. ಬದಿಯಡ್ಕ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬರನ್ನು ಜಾಲತಾಣದ ಮೂಲಕ ಪರಿಚಯಗೊಂಡು, ಸ್ನೇಹಾಚಾರ ಬೆಳೆಸಿ, ಬಳಿಕ ಸಲುಗೆ ಯಾಗಿ ಬೆತ್ತಲೆ ಫೋಟೋ, ಆಶ್ಲೀಲ ಮಾತುಗಳ ವೀಡಿಯೋ ಕಾಲ್ ಗಳನ್ನು ಪಡೆದು ಅನಂತರ ಅದನ್ನು ಜಾಲತಾಣದಲ್ಲಿ ಹಾಕಿ
ಪ್ರಚಾರ ಮಾಡುವುದಾಗಿ ಬೆದರಿಸಿ 10ಲಕ್ಷಕ್ಕೂ ಅಧಿಕ ರೂ.ದೋಚಿದ ಹಿನ್ನೆಲೆಯಲ್ಲಿ ಆರೋಪಿಯಾದ ಅಶ್ವಥ್ ನನ್ನು ಬಂಧಿಸಲಾಗಿದೆ.
ಬದಿಯಡ್ಕ ಠಾಣಾ ವ್ಯಾಪ್ತಿಯ ಯುವಕನೋರ್ವ ನೀಡಿದ ದೂರಿನಂತೆ ಬದಿಯಡ್ಕ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಬಳಿಕ ಮಂಜೇಶ್ವರ ಎಸ್.ಐ.ಅನೂಪ್ ಕುಮಾರ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿ ಬದಿಯಡ್ಕ ಠಾಣೆಗೆ ಹಸ್ತಾಂತರಿಸಲಾಯಿತು.
ಯಕ್ಷಗಾನ ಕಲಾವಿದನೆಂಬ ನೆಲೆಯಲ್ಲಿ ಅಶ್ವಥ್ ಆಚಾರ್ಯ ಬದಿಯಡ್ಕ ಬಳಿಯ ವ್ಯಕ್ತಿಯೊಡನೆ ಸ್ನೇಹಾಚಾರ ಮಾಡಿದ್ದನು. ಇವರೊಳಗೆ ಸಲುಗೆ ಏರ್ಪಟ್ಟು, ಅದು ಅನೈತಿಕ ಮಾತುಕತೆಗಳಾಗಿ ಸಲಿಂಗ ಸಂಬಂಧದಂತೆ ಬೆಳೆದವು. ಈ ಹಿನ್ನೆಲೆಯಲ್ಲಿ ಬದಿಯಡ್ಕದ ವ್ಯಕ್ತಿಯ ನಗ್ನ ಚಿತ್ರಗಳು, ಮತ್ತು ವೀಡಿಯೋ ಕಾಲ್ ಮಾತುಗಳು ಅಶ್ವಥ್ ಕೈ ಸೇರಿದ್ದವು. ಬಳಿಕ ಇದನ್ನೇ ಬಳಸಿ ಬ್ಲಾಕ್ ಮೇಲ್ ಮಾಡಿದ ಆರೋಪಿ ಕಳೆದ 2024ರ ನವಂಬರ್ 26ರಿಂದ ನಿಂದ ಡಿಸೆಂಬರ್ 4ರ ಅವಧಿಯಲ್ಲಿ ಹಂತ ಹಂತವಾಗಿ 10, 05, 000ರೂ ಗೂಗಲ್ ಪೇ ಮೂಲಕ ಪಡೆದು ವಂಚಿಸಿರುವುದಾಗಿ ದೂರು ದಾಖಲಾಗಿದೆ. ಇದರಂತೆ ಬಂಧಿತನಾದ ಆರೋಪಿಯನ್ನು ಬದಿಯಡ್ಕ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿದೆ.
ತೆಂಕುತಿಟ್ಟಿನ ಮೇಳವೊಂದರಲ್ಲಿ ಸ್ತ್ರೀವೇಷಧಾರಿಯಾದ ಅಶ್ವಥ್ ಇತ್ತೀಚೆಗೆ ಬಡಗುತಿಟ್ಟಿನ ಮೇಳಕ್ಕೂ ಹೋಗಿದ್ದು, ಕಲಾವಿದನಾಗಿ ಪಡೆದ ಜನಪ್ರಿಯತೆಯ ಮರೆಯಲ್ಲಿ ಈ ಕೃತ್ಯ ಎಸಗಿದ್ದನು.