- 20ವರ್ಷಗಳ ಹಿಂದೆ ರಕ್ಕಸ ಸುನಾಮಿ ಅಪ್ಪಳಿಸಿದಾಗ ಕಡಲದಂಡೆಯ ತ್ಯಾಜ್ಯಗಳ ನಡುವೆ ಜೀವಂತ ಸಿಕ್ಕಿದ ಬಾಲೆಯನ್ನು ಸಾಕಿ, ಬೆಳೆಸಿ ಮದುವೆ ಮಾಡಿಸಿದ ಅಂದಿನ ಜಿಲ್ಲಾಧಿಕಾರಿ..!
- ಅಂದು ಜಿಲ್ಲಾಧಿಕಾರಿಯಾಗಿದ್ದ ವ್ಯಕ್ತಿ ಈಗ ತಮಿಳುನಾಡು ಸರಕಾರದ ಕಾರ್ಯದರ್ಶಿ.
- ಭರ್ತಿ ಇಪ್ಪತ್ತು ವರ್ಷಗಳ ಹಿಂದೆ ರಕ್ಕಸರೂಪಿ ತೆರೆಗಳಪ್ಪಿಳಿಸಿದ ತ್ಸುನಾಮಿ ದುರಂತದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡು ಅನಾಥ ಬಾಲೆಯಾಗಿ ಸಮುದ್ರ ದಂಡೆಯ ಕಸದ ರಾಶಿಯ ನಡುವೆ ಪತ್ತೆಯಾದ ಹಾಲು ಹಸುಳೆಯನ್ನು ಬೊಗಸೆಯಲ್ಲೆತ್ತಿ ಕಾಪಾಡಿದ ಅಂದಿನ ಅದೇ ಜಿಲ್ಲಾಧಿಕಾರಿ ಈಗ ಇಪ್ಪತ್ತು ವರ್ಷದ ಬಳಿಕ ಅದೇ ಮಗುವಿಗೆ ಅಪ್ಪನ ಜಾಗದಲ್ಲಿ ನಿಂತು ವಿವಾಹ ನೆರವೇರಿಸಿದ ಅನನ್ಯ ಮಾನವೀಯ ಘಟನೆಯೊಂದು ತಮಿಳು ನಾಡಿಂದ ವರದಿಯಾಗಿದೆ…
2004ರಲ್ಲಿ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯನ್ನು ದೇಶವೇ ಬೆಚ್ಚಿ ಬೀಳಿಸುವಂತೆ ಸುನಾಮಿ ಅಪ್ಪಳಿಸಿದಾಗ ಡಾ. ಜೆ.ರಾಧಾಕೃಷ್ಣನ್ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದರು. ತಕ್ಷಣದ ರಕ್ಷಣಾ ಚಟುವಟಿಕೆಗೆ ನೇತೃತ್ವ ನೀಡುವಾಗ ತನ್ನವರನ್ನೆಲ್ಲ ಕಳೆದುಕೊಂಡ ಅನಾಥ ಬಾಲೆ ಮೀನ ಎಂಬ ಮಗು ಜೀವಂತವಾಗಿ ಕಡಲದಂಡೆಯಿಂದ ಕಟ್ಟಡ ಅವಶಿಷ್ಟಗಳ ನಡುವಿಂದ ಪತ್ತೆಯಾಗಿದ್ದಳು. ಅಂದು ಸ್ವತಃ ಜಿಲ್ಲಾಧಿಕಾರಿಯೇ ಬಾಚಿ ಬೊಗಸೆಯಲ್ಲೆತ್ತಿ ಕಾಪಾಡಿದ ಮಗುವನ್ನು ಬಳಿಕ ಅವರೇ ಮುತುವರ್ಜಿಯಿಂದ ಸರಕಾರಿ ವ್ಯವಸ್ಥೆ ಮೂಲಕ ಸಾಕಿದ್ದರು, ಶಿಕ್ಷಣವಿತ್ತು ಸಲಹಿದ್ದರು.ಇಂದೀಗ ಅಪ್ಪನ ಜಾಗದಲ್ಲಿ ನಿಂತು ಅದೇ ಮಗುವಿಗೆ ಮಾಂಗಲ್ಯಭಾಗ್ಯವನ್ನೊದಗಿಸುವಾಗ ಹುಟ್ಟಿಸಿದ ಅಪ್ಪನಲ್ಲದಿದ್ದರೂ ಜಿಲ್ಲಾಧಿಕಾರಿಯ ಕಣ್ಣೀರಿಳಿಯಿತು..,ಕಂಠ ಗದ್ಗದಿತವಾಯಿತು.., ನೋಟಕರೆಲ್ಲಾ ಕಂಬನಿ ಮಿಡಿದರು..ಇದು ಹುಟ್ಟಿಸಿದ ಅಪ್ಪನಲ್ಲದೇ ಇದ್ದರೂ ಮುಗ್ಧ ಬಾಲೆಗೆ ಮರುಜನ್ಮ ಕೊಟ್ಟ ಅಧಿಕಾರಿಯ ಹೃದಯವಂತಿಕೆಗೆ ಸಾಕ್ಷ್ಯ ನುಡಿಯಿತು..
20ವರ್ಷಗಳ ಹಿಂದೆ ಮಗುವನ್ನವರು ನಾಗಪಟ್ಟಣದ ಸರಕಾರಿ ಚಿಲ್ಡ್ರೆನ್ಸ್ ಹೋಮಿಗೆ ಸೇರಿಸಿದ್ದರು. ಅವಳಿಗೆ ಏನೇನು ಬೇಕೋ ಅದನ್ನೆಲ್ಲಾ ಒದಗಿಸಿದ್ದರು. ಅವಳ ಶಿಕ್ಷಣ, ಸಾಧನೆ ಪ್ರತಿಯೊಂದನ್ನೂ ಗಮನಿಸಿದ ಅವರು ಯಶಸ್ಸಿನ ಪಾಲಿಗೆ ಆಧಾರ ಸ್ತಂಭವಾಗಿ ಜತೆಗೂಡಿದ್ದರು. ತಾನು ಸ್ಥಳಾಂತರಗೊಂಡರೂ ಮಗುವಿಗೇನೂ ತೊಂದರೆಯಾಗದಂತೆ ಕಾಳಜಿ ವಹಿಸಿದ್ದರು. ಅಂದು ಜಿಲ್ಲಾಧಿಕಾರಿಯಾಗಿದ್ದವರು ಈಗ ತಮಿಳುನಾಡು ಸರಕಾರದ
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಅವರು ಕಾಪಾಡಿ ಸಾಕಿದ ಮಗಳು, ಬೆಳೆದು ಶಿಕ್ಷಣ ಪಡೆದಾಗ ಆಕೆಗೆ ನರ್ಸ್ ಆಗಲು ಬಯಕೆ. ಅಡ್ಡಿ ಪಡಿಸದ ಅವರು ಎಲ್ಲವನ್ನೂ ನೆರವೇರಿಸಿದ್ದಾರೆ. ಇದಕ್ಕೆ ರಾಧಾಕೃಷ್ಣನ್ ಅವರ ಪತ್ನಿ ಕೃತಿಕಾ ಅವರ ಬೆಂಬಲಗಳೂ ಇದ್ದುವು.
ಕಡಲ ದಂಡೆಯ ರಕ್ಕಸ ಅಲೆಗಳ ನಡುವಿನಿಂದ ಜೀವ ಸಹಿತ ಸಿಕ್ಕಿದ ಮಗು ಬೆಳೆದು, ಶಿಕ್ಷಣ ಪಡೆದು ತನ್ನಿಚ್ಛೆಯಂತೆ ಬಯಸಿದಾತನನ್ನು ಮದುವೆಯಾಗಿದ್ದಾಳೆ. ಈ ಆಶೋತ್ತರವೊಂದನ್ನು ಈಡೇರಿಸಲು ಸಾಧ್ಯವಾದದ್ದೇ ನಮ್ಮ ಬದುಕಿನ ಭಾಗ್ಯ ಎಂದು ತಮಿಳ್ನಾಡು ಸರ್ಕಾರದ ಕಾರ್ಯದರ್ಶಿ ಆಗಿರುವ ಅಂದಿನ ಜಿಲ್ಲಾಧಿಕಾರಿ ಹಂಚಿಕೊಂಡಿದ್ದಾರೆ. ಮಾನವೀಯ ಮಿಡಿತ, ತುಡಿತದ ಈ ಸುದ್ದಿ ಈಗ ದೇಶದಲ್ಲಿಡೀ ಗಮನ ಸ