44
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರೀ ಭದ್ರತೆಯ ಕಣ್ಗಾವಲುಗಳ ನಡುವೆ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಗೈದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜತೆ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಪೂರೈಸುವ ಮುನ್ನ ಅವರು ಬೋಟ್ ಸವಾರಿ ನಡೆಸಿದರು. ಅಲ್ಲದೇ ಕುಂಭಮೇಳದ ಸಮಗ್ರ ವ್ಯವಸ್ಥೆಗಳ , ಸೌಕರ್ಯಗಳ ಮಾಹಿತಿ ಪಡದರಲ್ಲದೇ ಖುದ್ದು ವೀಕ್ಷಿಸಿದರು.
ಜನವರಿ 13ರಂದು ಮಕರ ಸಂಕ್ರಮಣ ದಿನದೊಂದಿಗೆ ಮಹಾಕುಂಭಮೇಳ ಆರಂಭವಾಗಿದೆ. ಈ ವರೆಗೆ 20ಕೋಟಿಗೂ ಅಧಿಕ ಜನರು ಪುಣ್ಯ ಸ್ನಾನ ನೆರವೇರಿಸಿದ್ದಾರೆ. ಫೆ.26ಕ್ಕೆ ಕುಂಭಮೇಳ ಕೊನೆಗೊಳ್ಳಲಿದೆ.