146
ಕಾಸರಗೋಡಿನ ಬೇಕಲ ರೈಲು ನಿಲ್ದಾಣ ಬಳಿ ರೈಲಿಗೆ ಕಲ್ಲೆಸೆದ ಇಬ್ಬರನ್ನು ಬಂಧಿಸಲಾಗಿದೆ.
ಉತ್ತರ ಭಾರತದ ಕೂಲಿಕಾರ್ಮಿಕ ಮುರ್ಷಿದಾಬಾದ್ ರಾನ್ನಿ ನಿವಾಸಿ ರೋಷನ್ ರಾಯ್ (19) ಹಾಗೂ ಕುಂಬ್ಡಾಜೆ ಮವ್ವಾರಿನ ಸುಂದರ(48) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ.ಇವರನ್ನು ಬೇಕಲ ಬೀಚ್ ನಿಂದ ಬಂಧಿಸಲಾಯಿತು.
ನಿನ್ನೆ ಮಧ್ಯಾಹ್ನ ಮಂಗಳೂರು ಚೆನ್ನೈ ಎಕ್ಸ್ಪ್ರೆಸ್ ರೈಲಿಗೆ ಇವರು ಕಲ್ಲೆಸೆದಿದ್ದರು. ರೈಲಿನ ಹಿಂಭಾಗದ ಭೋಗಿಗೆ ಕಲ್ಲೆಸೆದ ಕಾರಣ ಪ್ರಯಾಣಿಕರಿಗೆ ಗಾಯಗಳೇನೂ ಆಗಿಲ್ಲ. ಮದ್ಯ ಸೇವಿಸಿದ ಅಮಲಿನಲ್ಲಿ ಮೋಜಿಗೆ ಕಲ್ಲೆಸೆದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿರುವುದಾಗಿ ಪೋಲೀಸರು ತಿಳಿಸಿದ್ದಾರೆ.