22
- ದಕ್ಷಿಣ ಭಾರತದ ಬಹುಭಾಷಾ ನಟಿ ಪುಷ್ಪಲತಾ ಇನ್ನಿಲ್ಲ
- ಕನ್ನಡ ಸೇರಿದಂತೆ ಚತುರ್ಭಾಷೆಗಳ ನೂರಕ್ಕೂ ಅಧಿಕ ಚಿತ್ರಗಳ ನಾಯಕಿ
ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟಿ ಪುಷ್ಪಲತಾ(87) ನಿಧನರಾದರು. ಚೆನ್ನೈ ಟಿ.ನಗರದ ವಸತಿಯಲ್ಲಿ ಅವರು ಅಗಲಿದರು. ಸುದೀರ್ಘ ದಿನಗಳಿಂದ ಚಿಕಿತ್ಸೆಯಲ್ಲಿದ್ದ ಅವರು ವಯೋಸಹಜವಾಗಿ ನಿಧನರಾದರು.
ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಯ ನೂರಕ್ಕೂ ಅಧಿಕ ಚಿತ್ರಗಳಲ್ಲಿ ಅವರುನಾಯಕಿಯಾಗಿ ನಟಿಸಿದ್ದರು. 1958ರಲ್ಲಿ ಬಿಡುಗಡೆಗೊಂಡ ‘ಸೊಂಗಾಟೈ ಸಿಂಗಂ’ ತಮಿಳು ಸಿನಿಮಾದಲ್ಲಿ ನಟಿಸಿ ಚಿತ್ರರಂಗಕ್ಕೆ ಕಾಲೂರಿದ್ದ ಅವರು ಬಳಿಕ ಎಂ.ಜಿ.ಆರ್, ರಜನೀಕಾಂತ್, ಕಮಲಹಾಸನ್ ಚಿತ್ರಗಳಲ್ಲಿ ನಾಯಕಿಯಾಗಿ ಶೋಭಿಸಿದ್ದರು.
1999ರಲ್ಲಿ ಶ್ರೀಭಾರತಿ ನಿರ್ದೇಶನದ ‘ಪೂವಾಸಂ’ .ಅವರು ನಟಿಸಿದ ಕೊನೆಯ ಚಿತ್ರ. ಮೃತರು ನಟ, ನಿರ್ಮಾಪಕ ಎ.ವಿ.ಎಂ ರಾಜಾ ಸಹಿತ ಕುಟುಂಬ, ಅಭಿಮಾನಿಗಳನ್ನಗಲಿದ್ದಾರೆ.